ADVERTISEMENT

ಚಾಮರಾಜನಗರ | ಬಹುರೂಪಿಯಲ್ಲಿ ‘ಬೆಲ್ಲದ ದೋಣಿ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:28 IST
Last Updated 11 ಜನವರಿ 2026, 4:28 IST
ರಂಗವಾಹಿನಿ ತಂಡದ ‘ಬೆಲ್ಲದ ದೋಣಿ’ ನಾಟಕ
ರಂಗವಾಹಿನಿ ತಂಡದ ‘ಬೆಲ್ಲದ ದೋಣಿ’ ನಾಟಕ   

ಚಾಮರಾಜನಗರ: ನಗರದ ಪ್ರಸಿದ್ಧ ರಂಗವಾಹಿನಿ ತಂಡದ ‘ಬೆಲ್ಲದ ದೋಣಿ’ ನಾಟಕವು ಮೈಸೂರಿನ ರಂಗಾಯಣದಲ್ಲಿ ಜ.11 ರಿಂದ 18ರವರೆಗೆ ನಡೆಯುವ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನವಾಗಲಿದೆ.

ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯ ಗಡಿಭಾಗದಲ್ಲಿ ನಾಟಕ, ಜಾನಪದ, ಸಾಹಿತ್ಯ, ಕಲೆ, ಸಂಸ್ಕೃತಿ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವ ರಂಗವಾಹಿನಿ ತಂಡ ಹಲವು ಮಾಟಕಗಳನ್ನು ಪ್ರದರ್ಶಿಸಿದೆ. 

ಮಾಲತೇಶ್ ಬಡಿಗೇರ ಅವರ ಮಂಟೇಸ್ವಾಮಿ ಕಥಾಪ್ರಸಂಗ, ಕೆ.ವೆಂಕಟರಾಜು ಅವರ ಪೋಲಿ ಕಿಟ್ಟಿ, ಎಚ್.ಎಸ್. ಉಮೇಶ್ ಅವರ ಏಕಲವ್ಯ, ಸಿ.ಎಂ. ನರಸಿಂಹಮೂರ್ತಿ ಅವರ ಅಂಬೇಡ್ಕರ್ ಮತ್ತು ಎಚ್ಚಮ ನಾಯಕ, ರೂಬಿನ್ ಸಂಜಯ್ ಅವರ ಬೆಲ್ಲದ ದೋಣಿ ನಾಟಕಗಳು ನಾಡಿನಾದ್ಯಂತ ಪ್ರದರ್ಶನಗೊಂಡು ರಂಗಾಸಕ್ತರ ಗಮನ ಸೆಳೆದಿವೆ.

ADVERTISEMENT

ಇದೀಗ ಪ್ರತಿಷ್ಠಿತ ಬಹುರೂಪಿ ನಾಟಕೋತ್ವದಲ್ಲಿ ಪ್ರದರ್ಶನ ನೀಡಲು ‘ಬೆಲ್ಲದ ದೋಣಿ’ ನಾಟಕ ಆಯ್ಕೆಯಾಗಿರುವುದು ಜಿಲ್ಲೆಯ ರಂಗಾಸಕ್ತರಿಗೆ ಸಂತಸ ತಂದಿದೆ ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.