ಚಾಮರಾಜನಗರ: ‘ಕುಸಿಯುತ್ತಿರುವ ಮೌಲ್ಯಗಳನ್ನು ಜಾಗೃತಿಗೊಳಿಸುವ ಆಧ್ಯಾತ್ಮಿಕ ಜ್ಞಾನ, ಗುಣ ಹಾಗೂ ಶಕ್ತಿಯ ಸೂಚಕವೇ ಆಯುಧ ಪೂಜೆಯಾಗಿದೆ’ ಎಂದು ಮನೋಬಲ ತರಬೇತುದಾರಾದ ಬ್ರಹ್ಮಾಕುಮಾರಿ ದಾನೇಶ್ವರಿಜಿ ಅಭಿಪ್ರಾಯಪಟ್ಟರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಹಮ್ಮಿಕೊಂಡಿದ್ದ ಆಯುಧ ಪೂಜೆಯಲ್ಲಿ ಅವರು ಮಾತನಾಡಿದರು.
ದುರ್ಗಾ ಮಾತೆ ಮಹಿಷಾಸುರನ ವಿರುದ್ಧ 9 ದಿನ ಯುದ್ಧ ಮಾಡಿ ಸಂಹಾರ ಮಾಡುವ ಮೂಲಕ ಜಗತ್ತಿನ ಕತ್ತಲು ನಿವಾರಿಸಿದರು. ದೇವಿಯ ವಿಜಯದ ನೆನಪಿಗೆ 10ನೇ ದಿನವನ್ನು ವಿಜಯಮಿ ದಶಮಿಯಾಗಿ ಆಚರಿಸಲಾಗುತ್ತದೆ. ವಿಜಯದಶಮಿ ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿದೆ ಎಂದರು.
ದಶ ಹರ ಎಂದರೆ 10 ವಿಕೃತ ಅವಗಣಗಳುಳ್ಳ ರಾವಣನ ಸಂಹಾರ ಎಂದರ್ಥ. ಸರ್ವಶ್ರೇಷ್ಠ ಶಿವ ನೀಡಿದ ಸಹಜ ಯೋಗದಿಂದ ಅಷ್ಟ ಶಕ್ತಿಗಳು ಪ್ರಾಪ್ತವಾಗುತ್ತವೆ. ಸಹನ ಶಕ್ತಿ, ಅಳವಡಿಸಿಕೊಳ್ಳುವ, ಎದುರಿಸುವ, ನಿರ್ಣಯ ತೆಗೆದುಕೊಳ್ಳುವ, ಪರೀಕ್ಷಿಸುವ, ಸಹಕರಿಸುವ, ವಿಸ್ತಾರವನ್ನು ಸಂಕುಚಿತಗೊಳಿಸುವ, ಸಂಕ್ಷಿಪ್ತಗೊಳಿಸುವ ಶಕ್ತಿಗಳನ್ನು ಅಷ್ಟ ಶಕ್ತಿಗಳೆಂದು ಕರೆಯಲಾಗುತ್ತದೆ. ವಿಜಯದಶಮಿ ಎಂದರೆ 10 ವಿಕಾರಿ ಅವಗುಣಗಳ ಮೇಲೆ ವಿಜಯವನ್ನು ಸಾಧಿಸುವುದಾಗಿದೆ ಎಂದರು.
ಬ್ರಹ್ಮಕುಮಾರಿ ಆರಾಧ್ಯ, ಆರೋಗ್ಯ ಇಲಾಖೆ ಅಧಿಕಾರಿ ಪುಷ್ಪಾ, ಗೀತಾ, ಮಾಣಿಕ್ಯ, ವಿರೂಪಾಕ್ಷ, ಸತೀಶ್, ನಾಗರಾಜ್, ಪುಟ್ಟಶೇಖರಮೂರ್ತಿ, ಶ್ರೀನಿವಾಸ್, ಅರ್ಜುನ್, ಶಶಿ, ನಿರ್ಮಲಾ, ವಿದ್ಯಾ, ಸುನಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.