
ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರದ ಸಮೂಹ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮಧ್ಯರಂಗನಾಥ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಗುರುವಾರ ನಡೆಯಿತು.
ಶ್ರೀ ಮಧ್ಯರಂಗನಾಥಸ್ವಾಮಿ ದೇವಸ್ಥಾನ, ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನ ಹಾಗೂ ಶ್ರೀ ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿಗಳ ಏಣಿಕೆ ಕಾರ್ಯ ಜರುಗಿದ್ದು, ₹18.40 ಲಕ್ಷ ನಗದು ಹಾಗೂ ಒಂದೂವರೆ ಗ್ರಾಂ ಚಿನ್ನ, 8 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ.
ಹುಂಡಿ ಏಣಿಕೆ ಕಾರ್ಯದಲ್ಲಿ ತಹಶೀಲ್ದಾರ್ ಬಸವರಾಜು ನೇತೃತ್ವದಲ್ಲಿ ನಡೆದಿದ್ದು, ಏಣಿಕೆ ಕಾರ್ಯದಲ್ಲಿ ರಾಜಸ್ವ ನೀರಿಕ್ಷಕರು ರಂಗಸ್ವಾಮಿ, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್, ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ದೇವಸ್ಥಾನದ ಅರ್ಚಕ ಶ್ರೀಧರ್, ಮಹೀಂದ್ರ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಗ್ರಾಮ ಸಹಾಯಕರು, ದೇವಸ್ಥಾನ ಸಿಬ್ಬಂದಿ ಇದ್ದರು. ಗ್ರಾಮಾಂತರ ಪಿಎಸ್‌ಐ ಉಮಾವತಿ ಬಂದೋಬಸ್ತ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.