ADVERTISEMENT

ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಇಂದಿನಿಂದ

ಇಂದು ಚಂದ್ರಮಂಡಲೋತ್ಸವ, ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:21 IST
Last Updated 9 ಜನವರಿ 2020, 14:21 IST
ಚಿಕ್ಕಲ್ಲೂರಿನ ಹಳೇ ಮಠದಲ್ಲಿರುವ ಸಿದ್ದಪ್ಪಾಜಿ ಗದ್ದುಗೆ
ಚಿಕ್ಕಲ್ಲೂರಿನ ಹಳೇ ಮಠದಲ್ಲಿರುವ ಸಿದ್ದಪ್ಪಾಜಿ ಗದ್ದುಗೆ   

ಹನೂರು: ವಿಶಿಷ್ಟ ಆಚರಣೆ ಮತ್ತು ವಿಭಿನ್ನ ಸಂಸ್ಕೃತಿ ಮೂಲಕ ರಾಜ್ಯದ ಗಮನಸೆಳೆದಿರುವ ಚಿಕ್ಕಲ್ಲೂರು ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಐದು ದಿನಗಳ ಕಾಲ ನಡೆಯುವ ವಿಜೃಂಭಣೆಯ ಜಾತ್ರೆಗೆ ಶುಕ್ರವಾರ ರಾತ್ರಿ ಜರುಗುವ ಚಂದ್ರಮಂಡಲೋತ್ಸದ ಮೂಲಕ ವಿದ್ಯುಕ್ತ ಚಾಲನೆ ದೊರೆಯಲಿದೆ.

‘ಕಬ್ಬಿಣ ಭಿಕ್ಷೆ ತಂದು ಕೊಟ್ಟ ಮೇಲೆ, ಚಿಕ್ಕಳ್ಳಿ ಗ್ರಾಮವ ನಾಳೆ ಚಿಕ್ಕಲ್ಲೂರು ಮಾಡ್ತೀನಿ. ಒರಗ ದೇವರು ನಾನಾಗುತೀನಿ ಮೆರೆಯೋ ದೇವರು ನೀನಾಗು ಕಂದಾ.. ನಿನಗೆ ಚಿಕ್ಕಲ್ಲೂರಯ್ಯ ಅಂತ ನಾಮಕರಣ ಮಾಡತೀನಿ, ನಾಳೆ ಸುರಮುನ್ನೂರು ಜನರು ನಿನ್ನ ಸೇವೆ ಮಾಡುವಂತಾಗಲಿ’ ಎಂದು ಶಿಷ್ಯ ಸಿದ್ದಪ್ಪಾಜಿಯನ್ನು ಹರಸುವ ಪ್ರಸಂಗ ಮಂಟೇಸ್ವಾಮಿ ಕಾವ್ಯದಲ್ಲಿ ಬರುತ್ತದೆ.

ಸಪ್ತ ಗ್ರಾಮಗಳ ಸಮಾಗಮ: ಸಿದ್ದಪ್ಪಾಜಿಯು ಪಾಂಚಾಳರು ಒಡ್ಡುವ ಸವಾಲುಗಳೆಂಬ ಪವಾಡಗಳನ್ನು ಗೆದ್ದು ಏಳು ಊರುಗಳ ಪಾಳೇಪಟ್ಟುಗಳ ಪಾಳೇಗಾರರನ್ನು ಒಕ್ಕಲು ಪಡೆದು ಚಿಕ್ಕಲೂರಲ್ಲಿ ನೆಲಸುತ್ತಾನೆ. ಹೀಗಾಗಿ ಏಳು ಊರುಗಳ ಜನರು ಒಗ್ಗೂಡಿ ವಿಜೃಂಭಣೆಯಿಂದ ಈಉತ್ಸವವನ್ನು ಆಚರಿಸುತ್ತಾರೆ. ಕಾವೇರಿ ಕಣಿವೆಯ ಮಗ್ಗುಲಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಜಾತ್ರೆ ಜಿಲ್ಲೆಯಲ್ಲಿ ಹೊಸ ವರ್ಷದಲ್ಲಿ ಮೊದಲ ಜಾತ್ರೆ. ಸುಗ್ಗಿ ಮುಗಿದು ದವಸಧಾನ್ಯಗಳನ್ನು ತುಂಬಿಕೊಳ್ಳುವ ಕೃಷಿಕ ಸಮುದಾಯಗಳಿಗೆ ಈ ಜಾತ್ರೆ ಸಮೃದ್ಧಿಯ ಸಂಕೇತ.

ADVERTISEMENT

ಐದು ಹಗಲು, ಐದು ರಾತ್ರಿ ಅಪಾರ ಜನಸಂದಣಿಯ ನಡುವೆ ಜರುಗುವ ಜಾತ್ರೆಯಲ್ಲಿ ಒಂದೊಂದು ದಿನವು ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ. ಮೊದಲ ದಿನ ರಾತ್ರಿ ನಡೆಯುವ ಚಂದ್ರಮಂಡಲ ಒಂದು ಬೆಳಕಿನ ಆಚರಣೆ. ಇದು ನಡೆಯುವುದು ಹುಣ್ಣಿಮೆಯ ದಿನ ಮಧ್ಯರಾತ್ರಿ. ಚಂದ್ರಮಂಡಲವು ಪರಂಜ್ಯೋತಿ, ಜ್ಯೋತಿರ್ಲಿಂಗಯ್ಯನ ಪ್ರತಿರೂಪ ಎಂಬುದು ಭಕ್ತರ ಭಾವನೆ. ಎರಡನೇ ದಿನ ನಡೆಯುವುದು ದೊಡ್ಡವರ ಸೇವೆ. ಧರೆಗೆ ದೊಡ್ಡವರು ಎಂದು ಕರೆಯುವ ದೊಡ್ಡಮ್ಮ ತಾಯಿ ಮತ್ತು ರಾಚಾಪ್ಪಾಜಿ ಅವರಿಗೆ ಸಲ್ಲಿಸುವ ಸೇವೆ. ಮೂರನೇ ದಿನ ಮುಡಿಸೇವೆ ಅಥವಾ ನೀಲಗಾರರ ದೀಕ್ಷೆ, ನಾಲ್ಕನೇ ದಿನ ಪಂಕ್ತಿಸೇವೆ (ಸಿದ್ಧರ ಸೇವೆ), ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆಬಾಗಿಲ ಸೇವೆಯೊಂದಿಗೆ ಜಾತ್ರೆಗೆ ತೆರಬೀಳುತ್ತದೆ.

ಹಲುಗೂರು ಭಿಕ್ಷೆ ಬಳಿಕ ಒಕ್ಕಲು ಪಡೆದ ಕಾರಣ ಏಳು ಗ್ರಾಮಗಳ ಜನರು ಒಟ್ಟಾಗಿ ಸೇರಿ ಆಚರಿಸುವ ಈ ಆಚರಣೆಯಲ್ಲಿ ಚಂದ್ರಮಂಡಲೋತ್ಸವಕ್ಕೆ ವಿಶೇಷ ಆದ್ಯತೆ. ಚಿಕ್ಕಲ್ಲೂರುಸುತ್ತಮುತ್ತಲಿನಬಾಣೂರು,ಬಾಳಗುಣಸೆ,ತೆಳ್ಳನೂರು,ಮಸ್ಕಯ್ಯನದೊಡ್ಡಿ, ಸುಂಡ್ರಳ್ಳಿ, ಕೊತ್ತನೂರು ಗ್ರಾಮಗಳ ಕುಲೇಳು ಹದಿನೆಂಟು ಸಮುದಾಯಗಳು ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟ ಆಚರಣೆಯೇ ಚಂದ್ರಮಂಡಲಉತ್ಸವ.ಈಉತ್ಸವಕ್ಕೆಒಂದೊಂದುಸಮುದಾಯದಜನರು ಒಂದೊಂದು ಸೇವೆಸಲ್ಲಿಸುವ ನಿಯಮವಿದೆ. ಚಂದ್ರಮಂಡಲವೆಂಬಬಿದಿರಿನಕಿರೀಟ,ತೇರಿನಜ್ಯೋತಿಯಆಕೃತಿ ನಿರ್ಮಾಣಕ್ಕೆ ತೆಳ್ಳನೂರುಗ್ರಾಮದ ಜನರುಬೊಂಬು, ಬಿದಿರು,ಅಚ್ಚೆನೀಡಿದರೆ,ಮಸ್ಕಯ್ಯನದೊಡ್ಡಿ ಗ್ರಾಮಸ್ಥರುಎಣ್ಣೆ,ಪೆಂಜು,ಬಾಣೂರುಹಾಗೂ ಬಾಳಗುಣಸೆಗ್ರಾಮದವರುಮಡಿ ಬಟ್ಟೆಯನ್ನುನೀಡುತ್ತಾರೆ.ಹೀಗೆಎಲ್ಲಗ್ರಾಮಗಳುನೀಡಿದವಸ್ತುಗಳನ್ನುಸಂಗ್ರಹಿಸಿಶಾಗ್ಯಗ್ರಾಮದಗುರುಮನೆನೀಲಗಾರರುಚಂದ್ರಮಂಡಲವನ್ನುತಯಾರಿಸುತ್ತಾರೆ.

ಶಾಗ್ಯ ಗ್ರಾಮದವರ ಹೊಣೆ

ಪ್ರತಿ ವರ್ಷ ಚಂದ್ರಮಂಡಲ ಕಟ್ಟುವ ಜವಾಬ್ದಾರಿ ಶಾಗ್ಯ ಗ್ರಾಮಸ್ಥರದು. ಜಾತ್ರೆಯಮೊದಲನೆ ದಿನದಿಂದ ಹಿಡಿದು ಜಾತ್ರೆಯ ಕೊನೆಯ ದಿನದವರೆಗೂ ಈಗ್ರಾಮದಜನರುಸಕ್ರಿಯವಾಗಿಭಾಗವಹಿಸುತ್ತಾರೆ. ಜಾತ್ರೆಯ ಕೊನೆಯ ದಿನವಾದ ಬಾಗಿಲಸೇವೆಯಲ್ಲಿಇವರಿಗೆ ಮಠದ ವತಿಯಿಂದ ವಿಶೇಷ ಆತಿಥ್ಯವನ್ನು ನೀಡಿ ಗೌರವಿಸಲಾಗುತ್ತದೆ. ಚಿಕ್ಕಲ್ಲೂರು ಜಾತ್ರೆಆರಂಭಗೊಳ್ಳುವುದು ಹಾಗೂ ತೆರೆಬೀಳುವುದುಶಾಗ್ಯ ಗ್ರಾಮಸ್ಥರಿಂದಲೇ ಎಂಬುದು ಮತ್ತೊಂದು ವಿಶೇಷ.

ಜಿಲ್ಲಾಡಳಿತದ ಸಿದ್ಧತೆ

ಈ ಮಧ್ಯೆ, ಜಾತ್ರೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು‌ ಹಾಗೂ ಪ್ರಾಣಿ ಬಲಿಯ ಮೇಲೆ ನಿಗಾ ಇಡುವುದಕ್ಕಾಗಿ ಜಿಲ್ಲಾಡಳಿತವೂ ಅಗತ್ಯ ಸಿದ್ಧತೆ ನಡೆಸಿದೆ.

ಹೈಕೋರ್ಟ್‌ ಆದೇಶವಿರುವುದರಿಂದ ಪ್ರಾಣಿ ಬಲಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಕ್ರಮವಾಗಿ ಪ್ರಾಣಿಗಳ ಸಾಗಣೆಯ ಮೇಲೆ ನಿಗಾ ಇಡುವುದಕ್ಕಾಗಿ ಆರು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಪೊಲೀಸ್‌ ಹಾಗೂ ಇತರ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸೆಕ್ಟರ್‌ ಅಧಿಕಾರಿಗಳನ್ನೂ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.