ಗುಂಡ್ಲುಪೇಟೆ: ತಾಲ್ಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಜನಪದ ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಆದಿ ಹೊನ್ನನಾಯಕನಹಳ್ಳಿ ಪೀಠಾಧ್ಯಕ್ಷ ಶ್ರೀಕಂಠ ಸಿದ್ದಲಿಂಗ ಅರಸು ಭೂಮಿಪೂಜೆ ನೆರವೇರಿಸಿದರು.
ಗ್ರಾಮದ ಕಲಾವಿದ ಕೆಬ್ಬೇಪುರ ಸಿದ್ದರಾಜು ಅವರರ ನಿವೇಶನದಲ್ಲಿ ತರಬೇತಿ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ, ಚಾಮರಾಜನಗರ ಜಿಲ್ಲೆ ಜನಪದ ಕಲೆಗಳ ತವರು ಎಂದು ಕರೆಸಿಕೊಳ್ಳುತ್ತದೆ. ಇಲ್ಲಿನ ಸಾಕಷ್ಟು ಕಲಾವಿದರು ತಮ್ಮ ಕಲಾ ಸೇವೆಯನ್ನು ಸದ್ದಿಲ್ಲದೇ ಸಲ್ಲಿಸುತ್ತ ಬರುತ್ತಿದ್ದಾರೆ. ಈಗ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆಬ್ಬೇಪುರ ಸಿದ್ದರಾಜು ಜನಪದ ತರಬೇತಿ ಕೇಂದ್ರ ಪ್ರಾರಂಭಿಸುತ್ತಿರುವುದು ಉತ್ತಮ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಬ್ಬೇಪುರ ಸಿದ್ದರಾಜು, ಕಲಾವಿದರಾದ ಮೈಸೂರು ಗುರುರಾಜು, ಮಹದೇವಸ್ವಾಮಿ, ಬಸವಯ್ಯ, ನಾಗಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.