ADVERTISEMENT

ಹನೂರು: 50 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 15:34 IST
Last Updated 21 ಆಗಸ್ಟ್ 2020, 15:34 IST
ಹಸುವನ್ನು ರಕ್ಷಿಸಿದ ಕಾರ್ಯಾಚರಣೆಯ ದೃಶ್ಯ
ಹಸುವನ್ನು ರಕ್ಷಿಸಿದ ಕಾರ್ಯಾಚರಣೆಯ ದೃಶ್ಯ   

ಹನೂರು: ತಾಲ್ಲೂಕಿನ ಎಂ.ಜಿ.ದೊಡ್ಡಿ ಗ್ರಾಮದ ಜಮೀನಿನೊಂದರ ಬಾವಿಗೆ ಆಯ ತಪ್ಪಿ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆ ಎತ್ತವಲ್ಲಿ ಯಶಸ್ವಿಯಾಗಿದ್ದಾರೆ.

ಕೌದಳ್ಳಿ ಸಮೀಪದ ಎಂ.ಜಿ.ದೊಡ್ಡಿ ಗ್ರಾಮದ ಶಾಂತರಾಜು ಎಂಬುವವರ ಹಸು ಶುಕ್ರವಾರ ಬೆಳಿಗ್ಗೆ ಜಮೀನಿನಲ್ಲಿ ಮೇಯುತ್ತಿದ್ದಾಗ ಆಯತಪ್ಪಿ ಪಕ್ಕದಲ್ಲಿ ಇದ್ದ 50 ಅಡಿ ಆಳದ, ಬತ್ತಿದ ತೆರೆದ ಬಾವಿಗೆ ಬಿದ್ದಿದೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಹನೂರು ಪಟ್ಟಣದ ಅಗ್ನಿಶಾಮಕ ದಳದ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಠಾಣಾಧಿಕಾರಿ ಶೇಷ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅದೃಷ್ಟವಶಾತ್ ಹಸುವಿಗೆ ಯಾವುದೇ ತೊಂದರೆಯಾಗಿಲ್ಲ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಗಿರೀಶ್, ನಾಗೇಶ್, ಜಯಪ್ರಕಾಶ್, ಆನಂದ್ ಇತರರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.