ಕೊಳ್ಳೇಗಾಲ: ಇಲ್ಲಿನ ಎಂಜಿಎಸ್‌ವಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ವಿಪರೀತ ಮದ್ಯಪಾನ ಮಾಡಿ ಮಲಗಿದ್ದ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ದೊಡ್ಡ ನಾಯಕರ ಬೀದಿ ನಿವಾಸಿ ಹಣ್ಣು ವ್ಯಾಪಾರಿ ಹನುಮಂತನಾಯಕ (70) ಮೃತ ದುರ್ದೈವಿ.
ಈತ ಪ್ರತಿನಿತ್ಯ ಹಣ್ಣು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ. ಇದರ ಜೊತೆಗೆ ಇವನು ಕುಡಿತದ ಚಟಕ್ಕೆ ಬಲಿಯಾಗಿದ್ದು ಬಂದ ಹಣವನ್ನೆಲ್ಲ ಮದ್ಯಪಾನಕ್ಕಾಗಿ ಖರ್ಚು ಮಾಡುತ್ತಿದ್ದ. ಎಲ್ಲಂದರಲ್ಲಿ ಮಲಗುತ್ತಿದ್ದು ಇಂದು ಬೆಳ್ಳಂ ಬೆಳಿಗ್ಗೆ ವಿಪರೀತ ಕುಡಿದು ಮೈದಾನದಲ್ಲಿ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮೃತ್ತದೇಹ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಿದರು. ಈ ಸಂಬಂಧ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.