ADVERTISEMENT

ಕಲ್ಲು ಬಂಡೆ ಮೇಲಿಂದ ಬಿದ್ದು ಜಿಂಕೆ ಸಾವು

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 14:00 IST
Last Updated 24 ಜನವರಿ 2025, 14:00 IST
ಕೊಳ್ಳೇಗಾಲ ಮೃತಪಟ್ಟ ಜಿಂಕೆಯನ್ನು ಪಶು ವೈದ್ಯರ ಬಳಿ ಸಾಗಿಸಿ ತಪಾಸಣೆ ಮಾಡಲಾಯಿತು
ಕೊಳ್ಳೇಗಾಲ ಮೃತಪಟ್ಟ ಜಿಂಕೆಯನ್ನು ಪಶು ವೈದ್ಯರ ಬಳಿ ಸಾಗಿಸಿ ತಪಾಸಣೆ ಮಾಡಲಾಯಿತು   

ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರ ದರ್ಗಾ ಬಳಿ ಶುಕ್ರವಾರ ಗ್ರಾಮಕ್ಕೆ ಬಂದಿದ್ದ ಜಿಂಕೆಯೊಂದು ಬಂಡೆ ಮೇಲಿಂದ ಬಿದ್ದು ಮೃತಪಟ್ಟಿದೆ.

ನಾಲ್ಕು ವರ್ಷದ ಗಂಡು ಜಿಂಕೆ ದರ್ಗಾ ಬಳಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿತ್ತು. ಇದನ್ನು ನೋಡಿದ ನಾಯಿಗಳು  ಅಟ್ಟಾಡಿಸಿಕೊಂಡು ಬಂದಿದೆ.  ಸಾರ್ವಜನಿಕರು ನಾಯಿಗಳನ್ನು ಓಡಿಸಿದ್ದಾರೆ. ಜಿಂಕೆ ಗಾಬರಿಯಿಂದ ದರ್ಗಾ ಬಳಿ ಸುಮಾರು 40 ಅಡಿ ಕಲ್ಲು ಬಂಡೆ ಮೇಲಿಂದ ಕೆಳಗೆ ಬಿದ್ದಿದೆ. ಬಿದ್ದ ತೀವ್ರತೆಗೆ ಗಾಯಗೊಂಡು ಮೃತಪಟ್ಟಿದೆ.

ನಂತರ ಸ್ಥಳಕ್ಕೆ ಆಗಮಿಸಿದ್ದ ಡಿಆರ್‌‌‌‌‌ಎಫ್ಒ ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿ ಸತ್ತ ಜಿಂಕೆಯನ್ನು ಸತ್ತೇಗಾಲ ಪಶುವೈದ್ಯರ ಬಳಿ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಶವಸಂಸ್ಕಾರ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT