ADVERTISEMENT

ಸೋಂಕು ನಿವಾರಕ ಸಿಂ‍ಪಡಿಸುವ ಸುರಂಗ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 15:16 IST
Last Updated 6 ಏಪ್ರಿಲ್ 2020, 15:16 IST
ಚಾಮರಾಜನಗರ ಮಾರುಕಟ್ಟೆಯ ಬಳಿ ನಿರ್ಮಿಸಿರುವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗವನ್ನು ನಗರಸಭೆಯ ಸಿಬ್ಬಂದಿ ಪರಿಶೀಲಿಸಿದರು
ಚಾಮರಾಜನಗರ ಮಾರುಕಟ್ಟೆಯ ಬಳಿ ನಿರ್ಮಿಸಿರುವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗವನ್ನು ನಗರಸಭೆಯ ಸಿಬ್ಬಂದಿ ಪರಿಶೀಲಿಸಿದರು   

ಚಾಮರಾಜನಗರ:‌ಕೊರೊನಾ ವೈರಸ್‌ ಸೋಂಕು ಹರಡುವ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ನಗರಸಭೆ ನಗರದ ಮಾರುಕಟ್ಟೆಯ ಬಳಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗವನ್ನು ನಿರ್ಮಾಣ ಮಾಡಿವೆ.

ಹೈಪೋ ಕ್ಲೋರೈಡ್‌ ದ್ರಾವಣವನ್ನು ಸಿಂಪಡಿಸುವ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದ್ದು, ಮಾರುಕಟ್ಟೆಗೆ ಹೋಗುವವರು ಇದರ ಮೂಲಕ ಪ್ರವೇಶಿಸಬೇಕು.

‘1000 ಲೀಟರ್‌ ನೀರಿಗೆ 10 ಲೀಟರ್‌ ಹೈಪೋ ಕ್ಲೋರೈಡ್‌ ಅನ್ನು ಮಿಶ್ರಣ ಮಾಡಿ ದ್ರಾವಣ ಸಿದ್ಧಪಡಿಸಲಾಗುತ್ತದೆ. ಇದರಿಂದ ದೇಹಕ್ಕೆ ಯಾವುದೇ ತೊಂದರೆ ಇಲ್ಲ’ ಎಂದು ನಗರಸಭೆಯ ಆರೋಗ್ಯ ನಿರೀಕ್ಷಕ ಶರವಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸದ್ಯ ಮಾರುಕಟ್ಟೆಯಲ್ಲಿ ಸುರಂಗ ನಿರ್ಮಾಣ ಮಾಡಲಾಗಿದೆ. ಎಪಿಎಂಸಿಗಳಲ್ಲೂ‌ಭಾರಿ ಪ್ರಮಾಣದಲ್ಲಿ ಜನರು ಬರುತ್ತಾರೆ. ಹಾಗಾಗಿ, ಅಲ್ಲೂ ಕೂಡ ಇಂತಹ ಸುರಂಗ ನಿರ್ಮಾಣ ಮಾಡಲು ಸೂಚಿಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.