ADVERTISEMENT

ಬೆಳೆ ರಕ್ಷಣೆ ತಂತ್ರ: ಶ್ವಾನಕ್ಕೆ ಹುಲಿಯ ಬಣ್ಣ!

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 12:38 IST
Last Updated 11 ಜನವರಿ 2023, 12:38 IST
ಹುಲಿಯ ಬಣ್ಣ ಬಳಿದಿರುವ ಶ್ವಾನ
ಹುಲಿಯ ಬಣ್ಣ ಬಳಿದಿರುವ ಶ್ವಾನ   

ಚಾಮರಾಜನಗರ: ಕೋತಿ ಸೇರಿದಂತೆ ಇತರೆ ಪುಟ್ಟ ಪ್ರಾಣಿ ಪಕ್ಷಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ವಿವಿಧ ತಂತ್ರಗಳಿಗೆ ಮೊರೆ ಹೋಗುವುದು ಸಾಮಾನ್ಯ. ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ ಭಾಗದ ರೈತರೊಬ್ಬರು ನಾಯಿಗೆ ಹುಲಿಯ ಬಣ್ಣ ಬಳಿದು ಬೆಳೆ ರಕ್ಷಿಸುವ ಪ್ರಯೋಗ ಮಾಡಿದ್ದಾರೆ.

ರೈತರು ಯಾರು ಎಂಬುದು ಗೊತ್ತಾಗಿಲ್ಲ. ಅಜ್ಜೀಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಯಿ ಓಡಾಡುತ್ತಿದ್ದು, ದೂರದಿಂದ ನೋಡುವಾಗ ಹುಲಿಯಂತೆ ಭಾಸವಾಗುತ್ತಿದೆ.

ಹುಲಿಯ ಬಣ್ಣ ಬಳಿದಿರುವ ಶ್ವಾನದ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.