ADVERTISEMENT

ಹಿಂದೂಗಳ ನೈಪುಣ್ಯ; ಮಸೀದಿ ಮಿನಾರ್‌ಗೆ ಶೃಂಗಾರ!

ಮಸೀದಿಯಲ್ಲಿನ ಕುಸರಿ ಕೆಲಸ ಮಾಡುವ ಹಿಂದೂ ಕುಶಲ ಕರ್ಮಿಗಳು

ನಾ.ಮಂಜುನಾಥ ಸ್ವಾಮಿ
Published 2 ಮೇ 2022, 20:15 IST
Last Updated 2 ಮೇ 2022, 20:15 IST
ಯಳಂದೂರಿನ ಮಸೀದಿಯೊಂದರ ಕಟ್ಟಡದ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಹಿಂದೂ ಕುಶಲ ಕರ್ಮಿ
ಯಳಂದೂರಿನ ಮಸೀದಿಯೊಂದರ ಕಟ್ಟಡದ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಹಿಂದೂ ಕುಶಲ ಕರ್ಮಿ   

ಯಳಂದೂರು:ಜಾತಿ–ಮತಗಳ ನಡುವೆ ಅಪಸ್ವರ ಸೂಸುತ್ತಿರುವ ಇಂದಿನ ದಿನಗಳಲ್ಲಿ ಸೌಹಾರ್ದ ತಾಣಗಳು ನೆಮ್ಮದಿ ಮೂಡಿಸುತ್ತವೆ. ಕಾಯಕ ಸೇವೆ ಮತ್ತು ಸಕ್ಕರೆ ಸೇವೆ ಮಾಡುವಲ್ಲಿ ಹಿಂದೂಗಳು ಈಗಲೂಮಸೀದಿಗಳತ್ತ ನೋಡಿದರೆ; ದರ್ಗಾ, ಮಿನಾರ್ ನಿರ್ಮಾಣ ಸಂದರ್ಭದಲ್ಲಿ ಮುಸ್ಲಿಮರುಹಿಂದೂಗಳ ಸಹಾಯ ಕೋರುತ್ತಾರೆ. ಈ ಮೂಲಕ, ಹಿಂದೂ-ಮುಸ್ಲಿಂ ಬಾಂಧವ್ಯದಬೆಸುಗೆಗೆ ಸಾಕ್ಷಿಯಾಗುತ್ತದೆ ಈದ್‌ ಉಲ್‌ ಫಿತ್ರ್‌ ಹಬ್ಬದ ಕ್ಷಣಗಳು.

ತಾಲ್ಲೂಕಿನಲ್ಲಿ ರಂಜಾನ್ ಮಾಸ ಆರಂಭವಾಯಿತೆಂದರೆ, ಮಸೀದಿಯ ಕೆಲಸಗಳಆರಂಭ ಕಳೆಗಟ್ಟುತ್ತದೆ. ಗೋಡೆ ನಿರ್ಮಾಣ, ಮಿನಾರುಗಳ ಶೃಂಗಾರ, ಅಲಂಕರಿಸುವಕೆಲಸಗಳು ಶುರುವಾಗುತ್ತವೆ. ಹಿಂದೂ ಸಮುದಾಯದ ಕುಶಲ ಶ್ರಮಿಕರು ಲಗುಬಗೆಯಿಂದ ಮಸೀದಿಅಂಗಳದಲ್ಲಿ ತಮ್ಮ ಕಾಯಕದ ಮುದ್ರೆ ಒತ್ತುತ್ತಾರೆ. ಈ ಸಮಯದಲ್ಲಿ ಮಸೀದಿಮೇಲೆ ಏರಿ ನೈಪುಣ್ಯದಿಂದ ಗಾರೆ, ಗಚ್ಚು ಬಳಿದು, ಬಣ್ಣ ತುಂಬಿ ನಿಗದಿತ ಸಮಯಕ್ಕೆ ಕೆಲಸ ಮುಗಿಸುತ್ತಾರೆ. ಹಬ್ಬದಂದು ಮುಸ್ಲಿಮರ ಮನೆಗಳಿಗೆ ತೆರಳಿ ಶುಭಾಶಯ ಕೋರುವ
ಪರಂಪರೆ ಭಾವೈಕ್ಯತೆಗೆ ಹಿಡಿದ ಕೈಗನ್ನಡಿ.

‘ಕೋವಿಡ್ ಕಾರಣದಿಂದ ಹಬ್ಬ ಎರಡು ವರ್ಷಗಳಿಂದ ಕೇವಲ ಆಚರಣೆಗೆ ಸೀಮಿತವಾಗಿತ್ತು. ಈ ವರ್ಷವಿವಿಧೆಡೆ ವಲಸೆ ಹೋದವರು ಜೊತೆಯಾಗಿದ್ದಾರೆ. ಮಸೀದಿಗಳು ಬಣ್ಣದ ಬಲ್ಬ್‌ಗಳ ಬೆಳಕಿನಲ್ಲಿಮಿನುಗುತ್ತಿವೆ. ಉಪವಾಸ ಮುಕ್ತಾಯದ ದಿನ ಹಿಂದೂ-ಮುಸ್ಲಿಮರು ಒಟ್ಟಾಗಿ ಕಲೆತುಊಟೋಪಚಾರದಲ್ಲಿ ಭಾಗವಹಿಸುತ್ತಾರೆ. ಮಸೀದಿಗಳಲ್ಲಿ ದುಡಿಯುವ ಶ್ರಮಿಕರಿಗೂ ವಿಶೇಷವಾಗಿಗೌರವಿಸಲಾಗುತ್ತದೆ. ಇದು ನೂರಾರು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಬದುಕಿದ್ದರ ಫಲ. ಕಷ್ಟ ಸುಖಗಳಲ್ಲೂ ಒಟ್ಟಾಗಿ ಸಾಗಬೇಕಿದೆ’ ಎಂದು ಜಾಮಿಯಾ ಮಸೀದಿ ಕಾರ್ಯದರ್ಶಿ ಮುನಾವರ್‌ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದೇವಸ್ಥಾನದ ಸೇವೆಗಳಂತೆ ಮಸೀದಿಗಳನ್ನು ಶೃಂಗರಿಸುವ, ಶುದ್ಧಗೊಳಿಸುವ ಕೌಶಲವೂಸಿದ್ಧಿಸಿದೆ. ಕೆಲವು ಕಾರ್ಮಿಕರು ಎಷ್ಟೇ ಕಷ್ಟವಾದರೂ, ಕೆಲಸ ನಿಲ್ಲಿಸುವುದಿಲ್ಲ.ಮಸೀದಿಯನ್ನು ಎತ್ತರಿಸುವ, ಕುರಾನ್ ಅಕ್ಷರಗಳನ್ನು ಅಂಟಿಸುವ, ಅಂಗಳಗಳನ್ನುಚಂದಗಾಣಿಸುವ ಕಲೆಗಳನ್ನು ಮಾಡುತ್ತಾರೆ. ಶ್ರಮ ಪ್ರಧಾನ ಕೆಲಸಗಳಲ್ಲಿ ನಿಷ್ಠೆ ಇದೆ.ಇದರಿಂದ ಸರ್ವಧರ್ಮ ಸಮನ್ವಯತೆ ಒಡಮೂಡುತ್ತದೆ. ಸಮಾಜದಲ್ಲಿ ಗೌರವವೂ ಇಮ್ಮಡಿಸುತ್ತದೆ.ನೆರೆ ಹೊರೆಯವರ ಸಹಕಾರದ ಅಗತ್ಯವನ್ನು ಇಂತಹ ಗಳಿಗೆಗಳು ಮನಗಾಣಿಸುತ್ತವೆ’ ಎಂದು ಶ್ರಮಿಕಇರಸವಾಡಿ ನಂಜುಂಡಸ್ವಾಮಿ ಹೇಳಿದರು.

ಬಸವ ಜಯಂತಿ, ಈದ್‌ ಒಂದೇ ದಿನ

ಈ ಬಾರಿಈದ್ ಉಲ್ ಫಿತ್ರ್ ಮತ್ತು ಬಸವ ಜಯಂತಿ ಒಂದೇ ದಿನ ಬಂದಿವೆ. ಭಾನುವಾರ ಚಂದ್ರ ದರ್ಶನಆಗದ ಕಾರಣ ಮಂಗಳವಾರ ಈದ್‌ ಆಚರಿಸಲಾಗುತ್ತದೆ. ಮುಂಜಾನೆ 8 ಗಂಟೆಯೊಳಗೆ ಮುಸ್ಲಿಮರುಹಬ್ಬ ಆಚರಿಸಿ, ಮಧ್ಯಾಹ್ನ ನಡೆಯುವ ಬಸವ ಜಯಂತಿ ಉತ್ಸವದಲ್ಲೂ ಪಾಲ್ಗೊಳ್ಳುತ್ತಾರೆ.

‘ಮುಸ್ಲಿಮರಿಗೆ ಉಪವಾಸ, ಪ್ರಾರ್ಥನೆ, ದಾನ, ಧರ್ಮ ಮಾಡುವ ಪವಿತ್ರ ತಿಂಗಳು ರಂಜಾನ್. ನೋಟ,
ಅಭ್ಯಾಸ, ಜೀವನ ಕ್ರಮಗಳು ಸನ್ಮಾರ್ಗದತ್ತ ಇರಬೇಕು. ಫಿತ್ರ್‌ದ ಮೂಲಕ ದಾನ ಮಾಡಿ
ಎಲ್ಲರನ್ನೂ ಸಹೋದರರಂತೆ ಕಾಣುತ್ತೇವೆ’ ಎಂದುಮಾಂಬಳ್ಳಿ ಶಕೀಲ್ ಅಹ್ಮದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.