ADVERTISEMENT

132 ಮಂದಿ ಗುಣಮುಖ, 85 ಜನಕ್ಕೆ ಸೋಂಕು

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:29 IST
Last Updated 21 ಜೂನ್ 2021, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 132 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 85 ಹೊಸ ಪ್ರಕರಣಗಳು ದೃಢಪಟ್ಟಿವೆ. ಸಾವು ಸಂಭವಿಸಿಲ್ಲ.

ಸಕ್ರಿಯ ಪ್ರಕರಣಗಳ ಸಂಖ್ಯೆ 809ಕ್ಕೆ ಇಳಿದಿದೆ. ಸೋಂಕಿತರಲ್ಲಿ 42 ಮಂದಿ ಐಸಿಯು ಹಾಗೂ 19 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 30,265ಕ್ಕೆ ತಲುಪಿದೆ. 28,966 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ಸೋಮವಾರ 1,412 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,326 ವರದಿಗಳು ನೆಗೆಟಿವ್‌ ಬಂದು, 86 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಈ ಪೈಕಿ, 85 ಪ್ರಕರಣಗಳನ್ನು ಜಿಲ್ಲಾಡಳಿತ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 30, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 16, ಕೊಳ್ಳೇಗಾಲದಲ್ಲಿ 14, ಹನೂರಿನಲ್ಲಿ 20, ಯಳಂದೂರು ತಾಲ್ಲೂಕಿನಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ. ಇನ್ನೆರಡು ಪ್ರಕರಣಗಳು ಹೊರ ಜಿಲ್ಲೆಗೆ ಸೇರಿವೆ.

ಸೋಮವಾರ ಆಸ್ಪತ್ರೆಯಲ್ಲಿದ್ದ ಒಂಬತ್ತು ಮಂದಿ, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದ 115 ಮಂದಿ ಹಾಗೂ ಹೋಂ ಐಸೊಲೇಷನ್‌ಲ್ಲಿದ್ದ ಎಂಟು ಮಂದಿ ಸೇರಿದಂತೆ 132 ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ ಚಾಮರಾಜನಗರ ತಾಲ್ಲೂಕಿನ 32, ಗುಂಡ್ಲುಪೇಟೆಯ 40, ಕೊಳ್ಳೇಗಾಲದ 25, ಹನೂರಿನ 23, ಯಳಂದೂರು ತಾಲ್ಲೂಕಿನ ಎಂಟು ಹಾಗೂ ಹೊರ ಜಿಲ್ಲೆಯ ನಾಲ್ವರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.