ಚಾಮರಾಜನಗರ: ಪ್ರತಿನಿತ್ಯ 7 ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಪುಣಜನೂರು ಕೋಳಿಪಾಳ್ಯ, ಮೂಕನಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಹರದನಹಳ್ಳಿ ವಿದ್ಯುತ್ ಸರಬರಾಜು ಉಪ ವಿಭಾಗ ಕಚೇರಿಯಲ್ಲಿ ಎಇಇಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ‘ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ರೈತರು ತೂಂದರೆ ಅನುಭವಿಸುತ್ತಿದ್ದಾರೆ. ಪುಣಜನೂರು ಗ್ರಾಮದಲ್ಲಿ 100ಕ್ಕೂ ಹೆಚ್ಚು ಬೋರ್‌ವೆಲ್‌ಗಳಿದ್ದು ವಿದ್ಯುತ್ ವ್ಯತ್ಯಯದಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಕತ್ತಲೆಯಲ್ಲಿ ಜಮೀನುಗಳಿಗೆ ತಿರುಗಾಡಲು ಕಷ್ಟವಾಗುತ್ತಿದೆ.
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಘವಿಸಿದ್ದು ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಸಮಸ್ಯೆ ನಿವಾರಿಸಬೇಕು ಎಂದು ರೈತರು ಒತ್ತಾಯಿಸಿದರು.
ಎಇಇ ದ್ರುಪದ್ ಮಾತನಾಡಿ ಶೀಘ್ರ ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ರಂಗನಾಥ್, ಸ್ವಾಮಿನಾಥನ್, ನಂಜುಂಡನಾಯ್ಕ, ಬಸವರಾಜು, ಬಂಗಾರು, ನಟರಾಜು, ರಾಮಲಿಂಗನಾಯ್ಕ, ರಮೇಶ ನಾಯ್ಕ, ಎಸ್.ಮಹದೇವನಾಯ್ಜ, ಬಾಲಾಜಿ, ಗಂಗನಾಯ್ಕ, ಶ್ರೀಧರ ಸೇರಿದಂತೆ ರೈತರು ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.