ADVERTISEMENT

ಚಾಮರಾಜನಗರ: 512 ಮಂದಿ ಗುಣಮುಖ, 249 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 6:40 IST
Last Updated 10 ಜೂನ್ 2021, 6:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ದಾಖಲೆಯ 512 ಮಂದಿ ಗುಣಮುಖರಾಗಿದ್ದಾರೆ. ಹಳೆಯ 77 ಪ್ರಕರಣಗಳು ಸೇರಿದಂತೆ 249 ಪ್ರಕರಣಗಳು ದೃಢಪಟ್ಟಿವೆ.

24 ಗಂಟೆಗಳ ಅವಧಿಯಲ್ಲಿ ನಾಲ್ವರುಮೃತಪಟ್ಟಿದ್ದಾರೆ. ಈ ಪೈಕಿ ಮೂವರು ಕೋವಿಡ್‌ನಿಂದ ಹಾಗೂ ಇನ್ನೊಬ್ಬರು ಅನ್ಯ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸಂಬಂಧ ಮೃತಪಟ್ಟವರ ಸಂಖ್ಯೆ 501ಕ್ಕೆ ತಲುಪಿದೆ.

ಗುಣಮುಖರಾದವರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಸದ್ಯ ಜಿಲ್ಲೆಯಲ್ಲಿ 2,293 ಸೋಂಕಿತರಿದ್ದಾರೆ. 57 ಮಂದಿ ಐಸಿಯುನಲ್ಲಿ, 66 ಜನ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿದ್ದಾರೆ.

ADVERTISEMENT

ಜಿಲ್ಲೆಯ ಒಟ್ಟು ಪ್ರಕರಣ28,827ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 26 ಸಾವಿರ ದಾಟಿದ್ದು,26,057ಕ್ಕೆ ತಲುಪಿದೆ.

ಬುಧವಾರ 1,716 ಮಂದಿಯ ಕೋವಿಡ್‌ ವರದಿ ಬಂದಿದ್ದು, 1,461 ವರದಿಗಳು ನೆಗೆಟಿವ್‌ ಬಂದಿವೆ. 255 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 74 ಪ್ರಕರಣಗಳ ವಿವರಗಳು ಇನ್ನಷ್ಟೇ ಪತ್ತೆಯಾಗಬೇಕಿದೆ. ಈ ಹಿಂದಿನ 77 ಪ್ರಕರಣಗಳು ಬಾಕಿ ಇದ್ದುದರಿಂದ ಅದನ್ನು ಬುಧವಾರದ ಪ್ರಕರಣಗಳೊಂದಿಗೆ ಸೇರಿಸಲಾಗಿದೆ.

249 ಮಂದಿ ಸೋಂಕಿತರಲ್ಲಿ, ಚಾಮರಾಜನಗರ ತಾಲ್ಲೂಕಿನ 77, ಗುಂಡ್ಲುಪೇಟೆಯ 61, ಕೊಳ್ಳೇಗಾಲದ 55, ಹನೂರಿನ 43 ಮತ್ತು ಯಳಂದೂರು ತಾಲ್ಲೂಕಿನ ಎಂಟು ಮಂದಿ ಇದ್ದಾರೆ. ಐವರು ಹೊರ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ.

ಗುಣಮುಖರಾದ 52 ಜನರಲ್ಲಿ ದಾಖಲೆಯ 188 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕೋವಿಡ್‌ ಕೇರ್‌ ಕೇಂದ್ರದಲ್ಲಿದ್ದ 318 ಮಂದಿ ಗುಣಮುಖರಾಗಿದ್ದಾರೆ. ಹೋಂ ಐಸೊಲೇಷನ್‌ನಲ್ಲಿದ್ದ ಆರು ಮಂದಿ ಸೋಂಕುಮುಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.