ಬಂಧನ
(ಪ್ರಾತಿನಿಧಿಕ ಚಿತ್ರ)
ಕೊಳ್ಳೇಗಾಲ: ತಾಲ್ಲೂಕಿನ ಸರಗೂರು ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 7 ಮಂದಿಯನ್ನು ಡಿವೈಎಸ್‌ಪಿ ಕಚೇರಿಯ ಅಪರಾಧ ಪತ್ತೆ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಮೋಳೆ ಬಡಾವಣೆಯ ನಿವಾಸಿ ಲೋಕೇಶ್, ಭೀಮನಗರದ ನಿವಾಸಿ ನಾಗ, ಪಾಂಡುರಂಗ ದೇವಸ್ಥಾನ ಬೀದಿಯ ಮಣಿ, ತಾಲ್ಲೂಕಿನ ಹೊಂಡರಬಾಳು ಗ್ರಾಮದ ಮಹೇಶ್, ರಂಗಸ್ವಾಮಿ, ಸರಗೂರು ಗ್ರಾಮದ ಚಿಕ್ಕ ಮಾದಯ್ಯ, ಮಧುವನಹಳ್ಳಿ ಗ್ರಾಮದ ಗುಂಡ ಬಂಧಿತ ಆರೋಪಿಗಳು.
‘ಇವರು ಅಕ್ರಮವಾಗಿ ಪ್ರತಿನಿತ್ಯ ಸರಗೂರು ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಕಚೇರಿಯ ಅಪರಾಧ ಪತ್ತೆ ದಳದ ಸಿಬ್ಬಂದಿ ದಾಳಿ ನಡೆಸಿ ಪಣಕಿಟ್ಟಿದ್ದ 22 ಸಾವಿರ ನಗದು ಹಾಗೂ 9 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದರು.
ದಾಳಿಯಲ್ಲಿ ಎ.ಎಸ್.ಐ ತಕಿವುಲ್ಲಾ, ರವಿಕುಮಾರ್, ವೆಂಕಟೇಶ್, ಬಿಳಿ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.