ಸಂತೇಮರಹಳ್ಳಿ: ಗೌರಿ-ಗಣೇಶ ಹಬ್ಬದ ಅಂಗವಾಗಿ ಸಮೀಪದ ಕುದೇರು ಪೊಲೀಸ್ ಠಾಣೆಯಲ್ಲಿ ಸುತ್ತಲಿನ ಗ್ರಾಮದ ಮುಖಂಡರೊಂದಿಗೆ ಮಂಗಳವಾರ ಶಾಂತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ಮಾತನಾಡಿ, ‘ಸೆ.6 ಮತ್ತು 7ರಂದು ನಡೆಯುವ ಗೌರಿ-ಗಣೇಶ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ಧಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಅನ್ಯೂನ್ಯತೆಯಿಂದ ಹಬ್ಬ ಆಚರಿಸಬೇಕು’ಎಂದರು.
‘ಗ್ರಾಮ ಪಂಚಾಯಿತಿ, ಅಗ್ನಿಶಾಮಕ ಠಾಣೆ, ವಿದ್ಯುತ್ ಇಲಾಖೆ ಹಾಗೂ ಧ್ವನಿವರ್ಧಕ ಅಳವಡಿಸಲು ತಹಶೀಲ್ದಾರ್ ಅನುಮತಿ ಪಡೆದು ಪೊಲೀಸರು ನೀಡುವ ಸಲಹೆ ಸೂಚನೆ ಪಾಲಿಸಬೇಕು. ಅನುಮತಿ ನೀಡಲಾಗುವ ಸಮಯದಲ್ಲಿ ಗಣಪತಿ ವಿಸರ್ಜನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಆಳವಡಿಸಲು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯಬೇಕು. ಗ್ರಾಮಗಳಲ್ಲಿ ಯಾವುದೇ ಸಂದರ್ಭದಲ್ಲಿ ಡಿಜೆ ಬಳಸಬಾರದು’ ಎಂದು ತಿಳಿಸಿದರು.
ಪಿಎಸ್‌ಐಗಳಾದ ಕುಮುದಾ, ತಾಜುದ್ಧೀನ್, ತನಿಖಾ ವಿಭಾಗದ ಪಿಎಸ್‌ಐ ಚೂಡಾಮಣಿ, ಕುದೇರು, ದೇಮಹಳ್ಳಿ, ಉಮ್ಮತ್ತೂರು, ಮೂಡಲ ಅಗ್ರಹಾರ, ಜನ್ನೂರು, ಹೆಗ್ಗವಾಡಿ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.