ಚಾಮರಾಜನಗರ: ಗೌರಿ ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆ ಹಬ್ಬದ ಸಿದ್ಧತೆಗಳು ಗರಿಗೆದರಿವೆ. ಈ ಬಾರಿ ಗೌರಿ ಮತ್ತು ಗಣೇಶ ಹಬ್ಬಗಳೆರಡೂ ಒಂದೇ ದಿನ ಬಂದಿರುವುದು ವಿಶೇಷ. ಗೌರಿ ಹಬ್ಬದಂದು ಬಾಗಿನ ಅರ್ಪಿಸಲು ಬಳಸುವ ಮೊರಕ್ಕೂ ಬೇಡಿಕೆ ಹೆಚ್ಚಾಗಿದೆ.
ನಗರದಲ್ಲಿ ಮೇದಾರ ಸಮುದಾಯದವರು ಬಿದಿರಿನಿಂದ ಮೊರವನ್ನು ತಯಾರಿಸುತ್ತಾರೆ. ಗಣೇಶ ಹಬ್ಬದಲ್ಲಿ ಅವರಿಗೆ ಕೈತುಂಬಾ ಕೆಲಸ.
ಗೌರಿ ಹಬ್ಬದ ದಿನ ಸ್ವರ್ಣಗೌರಿಗೆ ಬಾಗಿನ ಅರ್ಪಿಸಿದಮೊರಗಳನ್ನುಮುತ್ತೈದೆಯರಿಗೆ ನೀಡುವುದು ಸಂಪ್ರದಾಯ. ಹಾಗಾಗಿ, ಹಬ್ಬ ಆಚರಿಸುವವರೆಲ್ಲರೂ ಮೊರಗಳನ್ನು ಖರೀದಿಸುತ್ತಾರೆ.
ನಗರದಲ್ಲಿರುವ ಮೇದಾರ ಬೀದಿಯ 40 ಕುಟುಂಬದವರು ಮಾತ್ರ ಮೊರ ತಯಾರು ಮಾಡುತ್ತಾರೆ.ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಇವರು ಬೇರೆ ಉದ್ಯೋಗದತ್ತಹೋಗಲುಶಕ್ತಿ ಇಲ್ಲ. 50ಕ್ಕೂ ಹೆಚ್ಚು ಮಂದಿ ಮೊರ ತಯಾರಿಕೆಯಲ್ಲಿಜೀವನನಡೆಸುತ್ತಿದ್ದಾರೆ. ಉಳಿದವರು ಇದರೊಂದಿಗೆ ಕೂಲಿಗೆ ಹೋಗುತ್ತಾರೆ.
‘ಹಿಂದಿನಿಂದಲೂ ಬಂದ ವೃತ್ತಿಯನ್ನೇ ನೆಚ್ಚಿಕೊಂಡು ಜೀವನ ದೂಡುತ್ತಿದ್ದೇವೆ. ನಂಬಿದ ಬಿದಿರಿನ ವೃತ್ತಿಯಿಂದ ಒಪ್ಪೊತ್ತಿನ ಊಟಕ್ಕೆಕೊರತೆ ಆಗುವುದಿಲ್ಲಎನ್ನುವ ನಂಬಿಕೆಯೊಂದಿಗೆ ಇದೇ ಕಸುಬು ಮುಂದುವರಿಸಿದ್ದೇವೆ. ಜೂನ್ ಬಳಿಕ ಮಳೆಗಾಲ ಆರಂಭಗೊಳ್ಳುತ್ತದೆ. ಈ ನಡುವೆಡಿಸೆಂಬರ್‌ರೆಗೂ ಬಿದಿರಿನ ಬಂಬು ಕಡಿಮೆ ಪ್ರಮಾಣದಲ್ಲಿ ಕೊಡಗಿನ ಗೋಣಿಕೊಪ್ಪದಿಂದ ಬರುತ್ತದೆ’ ಎಂದು 70ರ ಬಸವಣ್ಣ ‘ಪ್ರಜಾವಾಣಿ’ಗೆ ಹೇಳಿದರು.
ಹೊಸ ಮೊರಕ್ಕೆ ಬೇಡಿಕೆ: ‘ಸ್ವರ್ಣಗೌರಿ ಹಬ್ಬದ ಬಾಗಿನಕ್ಕೆ ಹೊಸ ಮೊರಗಳನ್ನು ಹಬ್ಬದ ಹಿಂದಿನ ದಿನತೊಳೆದು ಒಣಗಿಸಿ ಅರಿಸಿನ ಹಚ್ಚುತ್ತಾರೆ. ಹಿರಿಯರು ಹಾಗೂ ಕಿರಿಯರಿಗಾಗಿ ಎರಡು ಜೊತೆ ದೊಡ್ಡ ಮೊರ, ಒಂದು ಜೊತೆ ಸಣ್ಣಮೊರ ನೀಡಲು ಸಿದ್ದಪಡಿಸುತ್ತೇವೆ. ಜೊತೆ ಮೊರಕ್ಕೆ₹ 90ರಿಂದ₹ 100 ಬೆಲೆ ಇದೆ’ ಎಂದು ಅವರು ಹೇಳಿದರು.
‘ಮೂರುಬಿದಿರು ಬಂಬುಗೆ ₹900 ನೀಡಿ ಖರೀದಿ ಮಾಡುತ್ತೇವೆ. ಇದರಿಂದ 15ರಿಂದ 22 ಮೊರಗಳನ್ನು ತಯಾರಿಸಬಹುದು. ದಿನವೊಂದಕ್ಕೆ 10ರಿಂದ20 ಮೊರಗಳನ್ನು ಸಿದ್ಧಪಡಿಸುತ್ತೇವೆ. ಹಬ್ಬ ಸಮೀಪಿಸಿದೆ. ಹೀಗಾಗಿ ಜೊತೆ ಮೊರ ₹100ಕ್ಕೆ ಮಾರಾಟ ಮಾಡುತ್ತೇವೆ. ಉಳಿದದಿನಗಳಲ್ಲಿ ₹60ಕ್ಕೆ ಮಾರಾಟಮಾಡುತ್ತೇವೆ’ ಎಂದು ವ್ಯಾಪಾರಿ ನಾಗೇಂದ್ರ ಹೇಳಿದರು.
ಮೊರದ ಜೊತೆಗೆ ಬುಟ್ಟಿಗಳು, ಏಣಿ, ಬೀಸಣಿಕೆ, ಚಾಪೆ ಸೇರಿದಂತೆ ಇತರ ಪರಿಕರಗಳನ್ನು ಇವರು ತಯಾರಿಸುತ್ತಾರೆ. ಗೌರಿ ಗಣೇಶ ಹಬ್ಬಕ್ಕೆ ಒಂದು ತಿಂಗಳು ಇರುವಾಗ ಮೊರ ತಯಾರಿಸಲು ಆರಂಭಿಸುತ್ತಾರೆ.ತಾಲ್ಲೂಕಿನ ತೆರಕಣಾಂಬಿ, ಸಂತೇಮರಹಳ್ಳಿ, ಯಳಂದೂರು ಭಾಗದಲ್ಲಿ ನಡೆಯುವಸಂತೆಹಾಗೂ ನಗರದ ದೊಡ್ಡ ಅಂಗಡಿ, ಚಿಕ್ಕ ಅಂಗಡಿ ಬೀದಿಗಳು ಇವರ ವ್ಯಾಪಾರ ಕೇಂದ್ರಗಳು.
ಆಧುನಿಕತೆಗೆ ಸಿಲುಕಿ ನಲುಗಿರುವ ಮೇದಾರರು
ಬಿದಿರು ಮತ್ತು ಬೆತ್ತದೊಂದಿಗೆ ನಿತ್ಯಜೀವನ ನಡೆಸುವ ಮೇದಾರರು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಬಿದಿರಿನ ವ್ಯಾಪಾರವೇ ಇವರಿಗೆ ಜೀವಾಳ. ಇದರಿಂದಲೇ ಒಂದು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ.
‘ಸರ್ಕಾರ ಮತ್ತು ಅರಣ್ಯ ಇಲಾಖೆನಮಗೆ ಆರ್ಥಿಕ ಹಾಗೂ ಇತರೇಸಹಾಯಹಸ್ತ ಚಾಚಿದರೆ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ಮೇದಾರರು.
ಉದ್ಯಮ ಬೆಳೆಸಬೇಕು: ಕೈಯಲ್ಲಿ ತಯಾರಿಸುವ ಕೈ ಕುಸುರಿಯ ಬಿದಿರಿನ ಪರಿಕರಗಳನ್ನು ಜನರು ಖರೀದಿಸಿ ಪ್ರೋತ್ಸಾಹಿಸಬೇಕು.ಆಗ ಮಾತ್ರ ನಾವು ತಯಾರಿಸುವ ಪರಿಕರಗಳಿಗೆಬೆಲೆ ಹೆಚ್ಚಿ ಬದುಕಿಗೆ ಆಸರೆಯಾಗುತ್ತದೆ. ಪ್ಲಾಸ್ಟಿಕ್ ಪರಿಕರಗಳಿಗೆ ಮೊರೆ ಹೋಗುವುದನ್ನು ನಿಲ್ಲಿಸಬೇಕು. ಇದರಿಂದಬಿದಿರುಉದ್ಯೋಗವನ್ನು ಉಳಿಸಬಹುದು’ ಎಂಬುದು ಅವರ ಕಳಕಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.