ಗುಂಡ್ಲುಪೇಟೆ: ಮನೆ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು 174 ಗ್ರಾಂ ಚಿನ್ನಾಭರಣ ಹಾಗೂ ₹61 ಸಾವಿರ ನಗದು ಹಣ ಕಳವು ಮಾಡಿರುವ ಘಟನೆ ತಾಲ್ಲೂಕಿನ ಕೊಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಹಾಗೂ ಕುಟುಂಬದವರು ಆ.25ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ರತ್ನಮ್ಮ ಪತಿ, ಮಗ, ಸೊಸೆ ಚಿನ್ನ, ಬೆಳ್ಳಿ ಇರಿಸಿದ್ದ ಬೀರು, ಮನೆಯ ಜೋಳಿಗೆ ಸೇರಿ ಇತರೆಡೆ ಇರಿಸಿದ್ದ ಓಲೆ, ಚೈನ್, ಉಂಗುರ, ಬ್ರೇಸ್ ಲೆಟ್, ಮಾಟಿ, ಸಣ್ಣ ಕಿವಿಯೋಲೆ ಸೇರಿ ಒಟ್ಟು ₹174 ಗ್ರಾಂ ಚಿನ್ನಾಭರಣ ಹಾಗು ಹಣವನ್ನು ದೋಚಿದ್ದಾರೆ.
ಘಟನೆ ಮಾಹಿತಿ ತಿಳಿದ ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ ಹಾಗು ಬೆರಳಚ್ಚು ತಜ್ಞರು ಆಗಮಿಸಿ ಮಹಜರು ನಡೆಸಿದರು. ಈ ಸಂಬಂಧ ರತ್ನಮ್ಮ ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.