ಹನೂರು: ಓಸಾಟ್ ಶೈಕ್ಷಣಿಕ ಧರ್ಮದತ್ತಿ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಬೆಂಗಳೂರು ಮೂಲದ ವಸಂತ ನಾಗರಾಜು ಎಂಬುವವರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾನಿಗಳ ಸಹಾಯದಿಂದ ₹60 ಲಕ್ಷ ವೆಚ್ಚದಲ್ಲಿ ನಾಲ್ಕು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಓಸಾಟ್ ಸಂಸ್ಥೆಯ ಕಾರ್ಯನಿರ್ವಾಹಕ ರವಿಕಿರಣ್ ಮಾತನಾಡಿ, ನಮ್ಮ ಭಾರತ ದೇಶದಿಂದ ಅಮೆರಿಕಕ್ಕೆ ತೆರಳಿ ನೆಲೆಸಿರುವವರು 2003 ರಲ್ಲಿ ಓಸಾಟ್ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಬೆಂಗಳೂರಿನಲ್ಲಿ 2013ರಿಂದ ಸಂಸ್ಥೆ ಕೆಲಸ ಮಾಡುತ್ತಿದ್ದು ನಮ್ಮ ದೇಶದ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತ ಬಂದಿದೆ ಎಂದರು.
ಈ ಯೋಜನೆಗೆ ಅಗತ್ಯವಾದ ಹಣವನ್ನು ಭಾರತ ಮತ್ತು ಅಮೇರಿಕದಲ್ಲಿರುವ ಓಸಾಟ್ ಸಂಸ್ಥೆಯ ಸ್ವಯಂ ಸೇವಕರು ಮತ್ತು ಉದ್ಯೋಗಿಗಳು ದಾನ ನೀಡುತ್ತಿದ್ದೂ ಲೊಕ್ಕನಹಳ್ಳಿಯಲ್ಲಿ ನಾಲ್ಕು ಕೊಠಡಿ ನಿರ್ಮಾಣಕ್ಕೆ ಬೆಂಗಳೂರಿನ ದಾನಿಗಳಾದ ವಸಂತ ನಾಗರಾಜು ರವರು ನೀಡುತ್ತಿದ್ದಾರೆ. ದೇಶದದ್ಯಾoತ 118 ಶಾಲೆಗಳಗೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಒದಗಿಸಲು ಯೋಜನೆ ಪ್ರಾರಂಭ ಮಾಡಿದ್ದೂ 105 ಶಾಲೆಗಳಲ್ಲಿ ಕೆಲಸ ಪೂರ್ಣಗೊಳಿಸಿದ್ದೇವೆ.
ಗ್ರಾಮೀಣ ಭಾಗದಲ್ಲಿ ಬಡವರ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು 300 ಕ್ಕೂ ಹೆಚ್ಚು ಮಕ್ಕಳು ಇರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಕ್ಕಳ ಸಂಖ್ಯೆ ಮತ್ತು ಕಲಿಕಾ ಗುಣಮಟ್ಟ ಜಾಸ್ತಿಯಾಗಬೇಕು ಎಂಬುದು ನಮ್ಮ ಆಶಯ. ಇದರ ಜೊತೆಗೆ ಮತ್ತೊಂದು ಕಡೆ ನಾವು ದಾನಿಗಳನ್ನು ಸಹಾಯ ಕೇಳಲು ಅನುಕೂಲವಾಗುತ್ತದೆ. ಆಗಾಗಿ ಶಿಕ್ಷಕರು ಈ ಬಗ್ಗೆ ಹೆಚ್ಚಿನ ಗಮನವಿಟ್ಟು ಉತ್ತಮ ಶಿಕ್ಷಣ ನೀಡುವ ಮೂಲಕ ಜವಾಬ್ದಾರಿ ವಹಿಸಬೇಕು.ಸರ್ಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಜರಾಗಬೇಕು ಮಕ್ಕಳ ಕಲಿಕೆಯ ಬಗ್ಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಸಾಟ್ ಸಂಸ್ಥೆಯ ನಿರ್ದೇಶಕರದ ಬಾಲ ಕೃಷ್ಣ ರಾವ್, ಎಂವಿಜಿಕೆ ಭಟ್,ಜಿತೇಶ್ ಉಪಾಧ್ಯಕ್ಷ ರಾಮ್ ವಿವೇಕ್, ಶಶಿಕಿರಣ್ ನಾಗರಾಜು, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳ ರಂಗಸ್ವಾಮಿ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಾದೇಶ್, ಸಹ ಶಿಕ್ಷಕರುಗಳಾದ ತಾರ,ಮೌನ, ಲೋಕೇಶ್, ಮುತ್ತಮ್ಮ, ಸಿಂಧು,ಉಷಾರಾಣಿ, ಮೇಘ, ಹಾಗು ಪೋಷಕರು ಮಕ್ಕಳು ಇದ್ದರು
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.