ADVERTISEMENT

ಜಿಲ್ಲೆಯಲ್ಲಿ ಮಿಂಚು ಸಹಿತ ಗಾಳಿ ಮಳೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 16:06 IST
Last Updated 24 ಮೇ 2020, 16:06 IST
ಚಾಮರಾಜನಗರದಲ್ಲಿ ಸುರಿದ ಮಳೆಯ ನೋಟ
ಚಾಮರಾಜನಗರದಲ್ಲಿ ಸುರಿದ ಮಳೆಯ ನೋಟ   

ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ರಾತ್ರಿ ಮಿಂಚು ಗಾಳಿ ಸಹಿತ ‌ಬಿರುಸಿನ ಮಳೆಯಾಗಿದೆ.

ರಾತ್ರಿ ಎಂಟು ಗಂಟೆಗೆ ಮಿಂಚು, ಗಾಳಿ ಆರಂಭವಾಯಿತು. 8.30ರ ಸುಮಾರಿಗೆ ಗಾಳಿ ಸಹಿತ ಧಾರಾಕಾರ ಮಳೆ ಆರಂಭವಾಯಿತು. ಯಳಂದೂರು, ಕೊಳ್ಳೇಗಾಲ, ಹನೂರು ಭಾಗಗಳಲ್ಲೂ ಮಳೆ ಸುರಿದಿದೆ.

ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು. ಚರಂಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯಿತು. ತಗ್ಗುಪ್ರದೇಶಗಳಿಗೂ ನೀರು ನುಗ್ಗಿದೆ.ತಡರಾತ್ರಿ ವರೆಗೂ ಮಳೆ ಮುಂದುವರಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.