ADVERTISEMENT

ಬಿರುಸಿನ ಮಳೆ: ಮರ, ಬಾಳೆ ಧರೆಗೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 15:26 IST
Last Updated 5 ಏಪ್ರಿಲ್ 2020, 15:26 IST
ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮರದ ರೆಂಬೆ ಮುರಿದಿರುವುವುದು
ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಬನ್ನಿ ಮರದ ರೆಂಬೆ ಮುರಿದಿರುವುವುದು   

ಚಾಮರಾಜನಗರ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಜೋರು ಗಾಳಿ ಸಮೇತ ಬಿರುಸಿನ ಮಳೆಯಾಗಿದ್ದು, ಕೆಲವು ಕಡೆ ಮರಗಳು, ಬಾಳೆ ಗಿಡಗಳು ಧರೆಗೆ ಉರುಳಿವೆ.

ಚಾಮರಾಜನಗರ, ಚಂದಕವಾಡಿ ಹೋಬಳಿಯ ಹೆಬ್ಬಸೂರು, ದಡ್ಡದಹಳ್ಳಿಯ ಸೇರಿದಂತೆ ವಿವಿಧ ಕಡೆಗಳಲ್ಲಿ 15 ನಿಮಿಷಗಳಿಂದ 30 ನಿಮಿಷಗಳವರೆಗೆ ಮಳೆ ಸುರಿದಿದೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ದಿಢೀರ್‌ ಮೋಡ ಕವಿದು 3.30ರ ಸುಮಾರಿಗೆ ಗಾಳಿ ಸಮೇತ ಮಳೆಯಾಗಿದೆ. ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಬನ್ನಿಮರದ ದೊಡ್ಡ ರೆಂಬೆ ಧರೆಗೆ ಉರುಳಿದೆ.ನಗರದ ಹಲವು ಕಡೆಗಳಲ್ಲಿ ಅಂಗಡಿಗಳ ಫಲಕಗಳು ಗಾಳಿಗೆ ಸಿಲುಕಿ ಕೆಳಗಡೆ ಬಿದ್ದಿವೆ. ಚೆನ್ನೀಪುರದ ಮೋಳೆಯಲ್ಲಿ ಬಾಳೆ ತೋಟ ನಾಶವಾಗಿದೆ.

ADVERTISEMENT

ರಸ್ತೆಯಲ್ಲಿ ಹರಿದ ನೀರು: ನಗರದಲ್ಲಿ 15 ನಿಮಿಷಗಳ ಕಾಲ ಬಂದ ಮಳೆಗೆ ರಸ್ತೆಯಲ್ಲೇ ನೀರು ಹರಿಯಿತು.‌ಬಿ.ರಾಚಯ್ಯ ಜೋಡಿ ರಸ್ತೆಯ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲೇ ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.