ಸಂತೇಮರಹಳ್ಳಿ: ಪಡಿತರ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಉಮೇರ್ ಎಂಬಾತನನ್ನು ಸಂತೇಮರಹಳ್ಳಿ ಪೊಲಿಸರು ಶುಕ್ರವಾರ ಬಂಧಿಸಿದ್ದಾರೆ.
ಚುಂಗಡಿಪುರ ಹಾಗೂ ಕೆಂಪನಪುರ ಗ್ರಾಮಗಳಲ್ಲಿ ಅಕ್ರಮವಾಗಿ 500 ಕೆ.ಜಿ ಪಡಿತರ ಅಕ್ಕಿಯನ್ನ ಖರೀದಿಸಿ, ಆಟೊ ರಿಕ್ಷಾ ಮೂಲಕ ಸಾಗಣೆ ಮಾಡುತ್ತಿದ್ದಾಗ ಚುಂಗಡಿಪುರ ಕಬಿನಿ ನಾಲೆಯ ಬಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್‌ಐ ಟಿ.ಎಂ.ತಾಜುದ್ಧೀನ್, ಆಹಾರ ನಿರೀಕ್ಷಕ ಚಿಕ್ಕಣ್ಣ, ಎಎಸ್‌ಐ ಉಮೇಶ್, ಸಿಬ್ಬಂದಿ ಮಂಜುನಾಥ್, ಮಾದೇಶ್, ಎಸ್.ಹೇಮಂತ್ ಕುಮಾರ್, ರಮೇಶ್ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.