ADVERTISEMENT

ಸಂತೇಮರಹಳ್ಳಿ | ಅಕ್ರಮವಾಗಿ ಮಣ್ಣು ಸಾಗಣೆ: ಟ್ರಾಕ್ಟರ್ ವಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:33 IST
Last Updated 2 ಮೇ 2025, 14:33 IST
ಸಂತೇಮರಹಳ್ಳಿ ಸಮೀಪದ ಕೆ.ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಮಣ್ಣು ಸಾಗಾಣೆ ಮಾಡುತ್ತಿದ್ದ ೩ ಟ್ಯಾಕ್ಟರ್‌ಗಳನ್ನು ಕುದೇರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಂತೇಮರಹಳ್ಳಿ ಸಮೀಪದ ಕೆ.ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಮಣ್ಣು ಸಾಗಾಣೆ ಮಾಡುತ್ತಿದ್ದ ೩ ಟ್ಯಾಕ್ಟರ್‌ಗಳನ್ನು ಕುದೇರು ಪೊಲೀಸರು ವಶಪಡಿಸಿಕೊಂಡಿದ್ದಾರೆ.   

ಸಂತೇಮರಹಳ್ಳಿ: ಸಮೀಪದ ಕೆ.ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಮಣ್ಣು ಸಾಗಾಣೆ ಮಾಡುತ್ತಿದ್ದ ವಾಹನಗಳನ್ನು ಕುದೇರು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಕೆ.ಬಸವನಪುರ ಗ್ರಾಮದ ಬಳಿ ಇರುವ ಸರ್ಕಾರಿ ಜಮೀನೊಂದರಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರದ ಮೂಲಕ ಇಟ್ಟಿಗೆ ತಯಾರು ಮಾಡಲು ಕೆಂಪು ಮಣ್ಣನ್ನು 3 ಟ್ರಾಕ್ಟರ್ ಮೂಲಕ ಸಾಗಣೆ ಮಾಡುತ್ತಿದ್ದರು.

ಖಚಿತ ಮಾಹಿತಿ ಆಧಾರ ಮೇರೆಗೆ ಕುದೇರು ಪೊಲೀಸ್ ಠಾಣೆ ಪಿಎಸ್‌ಐ ಕುಮುದಾ, ಸಿಬ್ಬಂದಿ ಚಾಮರಾಜು, ಪ್ರದೀಶ್ ದಾಳಿ ನಡೆಸಿ ಜೆಸಿಪಿ ಹಾಗೂ 3 ಟ್ರಾಕ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ADVERTISEMENT

ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ನೀಡಲಾಗಿದೆ ಎಂದು ಪಿಎಸ್‌ಐ ಕುಮುದಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.