ADVERTISEMENT

ಚಾಮರಾಜನಗರ: ಒಂದೇ ರಾತ್ರಿಯಲ್ಲಿ 14 ಕೋವಿಡ್‌ ಸೋಂಕಿತರು ಸಾವು

​ಪ್ರಜಾವಾಣಿ ವಾರ್ತೆ
Published 9 ಮೇ 2021, 5:38 IST
Last Updated 9 ಮೇ 2021, 5:38 IST
ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆ
ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆ   

ಚಾಮರಾಜನಗರ: ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 4,186 ಮಂದಿ ಕೊರೊನಾ ಸೋಂಕಿತರು ಇದ್ದಾರೆ. ಇವರಲ್ಲಿ 50 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಮೃತಪಟ್ಟವರ ವಿವರ:

ADVERTISEMENT

ಕೊಳ್ಳೇಗಾಲ ಪಟ್ಟಣದ 45 ವರ್ಷದ ಮಹಿಳೆ, 64 ವರ್ಷದ ಮಹಿಳೆ, 64 ವರ್ಷದ ಪುರುಷ, 58 ವರ್ಷದ ಮಹಿಳೆ, ಹನೂರು ತಾಲ್ಲೂಕಿನ ಬಂಡಳ್ಳಿಯ 90 ವರ್ಷದ ಪುರುಷ, 50 ವರ್ಷದ ಪುರುಷ, ಚಾಮರಾಜನಗರ ತಾಲ್ಲೂಕಿನ ಕೆ.ಕೆ.ಹುಂಡಿ ಗ್ರಾಮದ 52 ವರ್ಷದ ಪುರುಷ, ಬಸ್ತಿಪುರದ 70 ವರ್ಷದ ಮಹಿಳೆ, ಅಮಚವಾಡಿಯ 39 ವರ್ಷದ ಪುರುಷ, ಮಂಗಲ ಗ್ರಾಮದ 65 ವರ್ಷದ ಮಹಿಳೆ, ಹರದನಹಳ್ಳಿಯ 40 ವರ್ಷದ ಮಹಿಳೆ, ಕೋಳಿಪಾಳ್ಯ ಗ್ರಾಮದ 45 ವರ್ಷದ ಪುರುಷ, ಚಾಮರಾಜನಗರ ಪಟ್ಟಣದ 42 ವರ್ಷದ ಪುರುಷ, 59 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಶನಿವಾರದ ಸೋಂಕಿತರ ಪೈಕಿ 91 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 576 ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 41 ಮಂದಿ ಮಕ್ಕಳೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.