ಗುಂಡ್ಲುಪೇಟೆ: ‘ತಾಲ್ಲೂಕಿನ ಪತ್ರಕರ್ತರ ಹಿತ ಕಾಯಲು ಬದ್ಧ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು
ಪಟ್ಟಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ರಜೆಯಿಲ್ಲದೆ ಒತ್ತಡದಲ್ಲಿ ಪತ್ರಕರ್ತರು ಪ್ರತಿನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪತ್ರಕರ್ತರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬರು ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಆನ್ ಲೈನ್ ಮೂಲಕ ಸುದ್ದಿ ಓದುವ ಪ್ರವೃತ್ತಿ ಹೆಚ್ಚುತಿರುವುದರಿಂದ ಪತ್ರಿಕೆ ಪ್ರಸರಣೆ ಕಡಿಮೆಯಾಗುತ್ತಿದೆ. ಹಾಗಾಗಿ ವಸ್ತುನಿಷ್ಠ ವರದಿ ಬರೆಯುವ ಪತ್ರಿಕೆ ಕೊಂಡುಕೊಳ್ಳಬೇಕು ಎಂದರು.
ವಿಶೇಷ ಅನುದಾನದಲ್ಲಿ ಪತ್ರಿಕಾ ಭವನಕ್ಕೆ ಹಣ: ತಾಲ್ಲೂಕಿನಲ್ಲಿ ಪತ್ರಕರ್ತರ ಭವನಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಸಿಎಂ ವಿಶೇಷ ಅನುದಾನದಲ್ಲಿ ಪತ್ರಕರ್ತರ ಭವನಕ್ಕೆ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಪ್ರತ್ರಕರ್ತ ಕೆ.ಬಿ.ಗಣಪತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಪತ್ರಿಕಾ ವಿತರಕರು ಮತ್ತು ಮಾರಾಟಗಾರರಿಗೆ ಸನ್ಮಾನಿಸಲಾಯಿತು.
ಪತ್ರಕರ್ತ ಕೆ.ಶಿವಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಕಮಿಟಿ ಸದಸ್ಯ ಗೂಳಿಪುರ ನಂದೀಶ್ ಮಾತನಾಡಿದರು.
ಪುರಸಭಾ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಸದಸ್ಯ ಎನ್.ಕುಮಾರ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಡಹಳ್ಳಿ ಮಹೇಶ್, ಉಪಾಧ್ಯಕ್ಷ ಸೋಮಶೇಖರ್, ಎಂ.ಮಲ್ಲೇಶ್, ನಿರ್ದೇಶಕರಾದ ಬಸವರಾಜು ಎಸ್.ಹಂಗಳ, ಎಚ್.ಆರ್.ರಾಜಗೋಪಾಲ್, ಚಂದ್ರಶೇಖರ, ಮಹೇಂದ್ರ ಹಸಗೂಲಿ, ಮಂಜುನಾಥ್, ದೇವರಹಳ್ಳಿ ಶಿವಕುಮಾರ್, ಕೃಷ್ಣ ಗೋಪಾಲ್, ಮಲ್ಲೇಶ್ ವೀರನಪುರ, ಕಾಂತರಾಜು, ನಾಗೇಶ್, ಬೇಗೂರು ಮಣಿಕಂಠ, ಶೇಖರ್, ರಾಜೇಶ್ ಭಟ್ಟ, ಹರೀಶ್, ಶೇಖರ್, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.