ADVERTISEMENT

ಕಠಿಣ ಪರಿಶ್ರಮದಿಂದ ರೂಪುಗೊಳ್ಳುವ ಕಲಾ ಪ್ರತಿಭೆ

ಕಲಾ ಪ್ರತಿಭೋತ್ಸವಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:11 IST
Last Updated 10 ಡಿಸೆಂಬರ್ 2025, 3:11 IST
ಚಾಮರಾಜನಗರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ ಉದ್ಘಾಟಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿದರು
ಚಾಮರಾಜನಗರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ ಉದ್ಘಾಟಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿದರು   

ಚಾಮರಾಜನಗರ: 'ಪ್ರತಿಭೆ ದೈವದತ್ತವಾಗಿ ಬರುವುದಲ್ಲ, ಕಠಿಣ ಪರಿಶ್ರಮದಿಂದ ರೂಪುಗೊಳ್ಳುವಂಥದ್ದು; ವೇದಿಕೆ ಸಿಕ್ಕಾಗ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶನ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಕಿವಿಮಾತು ಹೇಳಿದರು.

ನಗರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಕಲಾ ಪ್ರತಿಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶ್ರಮದಿಂದ ದಕ್ಕುವ ಪ್ರತಿಭೆಯನ್ನು ಬಳಸಿಕೊಂಡು ಸಾಧನೆ ಮಾಡಬೇಕು. ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ ಹಾಗೂ ನೃತ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಧಕರ ಮಾರ್ಗದರ್ಶನದೊಂದಿಗೆ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಯಶಸ್ಸು ಲಭ್ಯವಾಗುತ್ತದೆ.ವಿದ್ಯಾರ್ಥಿಗಳು ಆಸಕ್ತಿ ಇರುವ ಕ್ಷೇತ್ರಗಳಲ್ಲಿ  ಅಭ್ಯಾಸ ಮಾಡಿದರೆ ಸಾಧಕರಾಗಬಹುದು. ಸ್ಪರ್ಧೆಗಳಲ್ಲಿ ಸೋಲು, ಗೆಲುವುಗಳನ್ನು ಸಮಾನಚಿತ್ತದಿಂದ ಸ್ವೀಕರಿಸಬೇಕು. ಗುರಿ ಸಾಧನೆಯೆಡೆಗೆ ಸದಾ ಕಾರ್ಯೋನ್ಮುಖರಾಗಿರಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳು ಕಲೆಯನ್ನು ಪ್ರದರ್ಶಿಸಲು ಕಲಾ ಪ್ರತಿಭೋತ್ಸವ ಉತ್ತಮ ವೇದಿಕೆಯಾಗಿದೆ. ಪ್ರತಿಭೆ ಗುರುತಿಸಲು ಸಹಕಾರಿಯಾಗಿರುವ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಬಿ.ಎಸ್. ರಾಜು, ಜಿಲ್ಲಾಡಳಿತ ಶಿರಸ್ತೆದಾರ ರಂಗರಾಜು, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ದೊಡ್ಡಗವಿ ಬಸಪ್ಪ, ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಬಿ. ಬಸವರಾ  ಉಪಸ್ಥಿತರಿದ್ದರು.

Highlights - ‘ಶಾಲಾ ಕಾಲೇಜು ಹಂತದಲ್ಲಿ ಪಠ್ಯೇತತರ ಚಟುವಟಿಕೆಗಳಿಗೆ ಒತ್ತು ಕೊಡಿ’ ‘ನಿರಂತರ ಅಭ್ಯಾಸ, ಕಠಿಣ ಪರಿಶ್ರಮದಿಂದ ಯಶಸ್ಸು ಖಚಿತ’ ‘ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರು ಶಿಕ್ಷಕರು ನೀರೆರೆಯಿರಿ’

Cut-off box - ‘ಕಲೆಯಿಂದ ಜೀವಂತಿಕೆ’ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಚ್.ಎನ್.ಪುಟ್ಟಗೌರಮ್ಮ ಮಾತನಾಡಿ ‘ಕಲೆ ಮನುಷ್ಯನನ್ನು ಸದಾ ಜೀವಂತಿಕೆ  ಹಾಗೂ ಚಟುವಟಿಕೆಗಳಿಂದ ಇರಿಸುತ್ತದೆ.   ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳಲು ಕಲೆ ಸಾಹಿತ್ಯ ಸಂಗೀತ ಕ್ರೀಡೆಗಳಲ್ಲಿ  ತೊಡಗಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು. ಚಾಮರಾಜನಗರ ಜನಪದ ಕಲೆಗಳ ತವರೂರಾಗಿದ್ದು  ಮಹದೇಶ್ವರ ಮಂಟೇಸ್ವಾಮಿ ಜನಪದೀಯ ಕಾವ್ಯಗಳು ಗೊರವನ ಕುಣಿತ ಕಂಸಾಳೆ ನೃತ್ಯ ಮುಂತಾದ ವಿವಿಧ ಕಲಾಪ್ರಕಾರಗಳು ನೆಲದ ಮಣ್ಣಿನಲ್ಲಿ ಜನ್ಮತಾಳಿವೆ. ಜಾಗತೀಕರಣದ ಹೊಡತದಿಂದ ಕಲಾ ಪ್ರಕಾರಗಳು ನಶಿಸದಂತೆ  ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.