ADVERTISEMENT

ಜಾತ್ಯತೀತ ಸಮಾಜ ಕಟ್ಟಲು ಕೀರ್ತನೆಗಳು ದಾರಿದೀಪ: ಶಾಸಕ ಗಣೇಶಪ್ರಸಾದ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:40 IST
Last Updated 9 ನವೆಂಬರ್ 2025, 2:40 IST
ಗುಂಡ್ಲುಪೇಟೆ ಪುರಸಭೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಶಿಧರ್ ಪಿ.ದೀಪು ಪುಷ್ಪಾರ್ಚನೆ ನೆರವೇರಿಸಿದರು
ಗುಂಡ್ಲುಪೇಟೆ ಪುರಸಭೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಶಿಧರ್ ಪಿ.ದೀಪು ಪುಷ್ಪಾರ್ಚನೆ ನೆರವೇರಿಸಿದರು   

ಗುಂಡ್ಲುಪೇಟೆ: ಜಾತ್ಯತೀತ ಸಮಾಜ ಕಟ್ಟಲು ಕನಕದಾಸರ ಕೀರ್ತನೆಗಳು ದಾರಿ ದೀಪವಾಗಿವೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಭಿಪ್ರಾಯ ಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. ಕನಕದಾಸರು ವಚನ ಮತ್ತು ದಾಸ ಸಾಹಿತ್ಯ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ, ವರ್ಗ ರಹಿತ ಸಮಾಜ ಕಟ್ಟಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಎಂ.ಎಸ್.ತನ್ಮಯ್ ಮಾತನಾಡಿ, ಕನಕದಾಸರು ಕವಿ, ಸಂಗೀತಗಾರ, ಸಮಾಜ ಸುಧಾರಕರಾಗಿದ್ದಾರೆ. ಅವ ಸಂದೇಶಗಳನ್ನು ಮೈಗೂಡಿಸಿಕೊಂಡರೆ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ADVERTISEMENT

ಮುಖ್ಯ ಭಾಷಣಕಾರ ಶಿಕ್ಷಕ ನಂದೀಶ್ ಮಾತನಾಡಿ, ಕನಕದಾಸರು ಸರಳ ಕನ್ನಡದಲ್ಲಿ ಕೀರ್ತನೆ ಮತ್ತು ಸಾಹಿತ್ಯವನ್ನು ರಚಿಸಿ ಕನ್ನಡತನ ಎತ್ತಿಹಿಡಿದಿದ್ದಾರೆ.  ಕೀರ್ತನೆಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿದರು.  ಎಂದು ಹೇಳಿದರು.

 ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಲ್.ಸುರೇಶ್, ರಾಜಶೇಖರ್, ಪುರಸಭಾ ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ, ಸದಸ್ಯ ಎನ್.ಕುಮಾರ್, ನಿರ್ಮಲ, ಅಣ್ಣಯ್ಯಸ್ವಾಮಿ, ಸುಭಾಷ್ ಮಾಡ್ರಹಳ್ಳಿ, ಕೆಂಪರಾಜು, ಎಚ್.ಎನ್.ಬಸವರಾಜು, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ಮುಖಂಡರಾದ ಬಸವರಾಜು, ಸುರೇಶ್ ನಾಯಕ, ಮಲ್ಲಯ್ಯನಪುರ ಶಶಿಕುಮಾರ್,  ಕುರುಬ ಸಮುದಾಯದ ಮುಖಂಡರು ಭಾಗವಹಿಸಿದ್ದರು.

‘ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯ’

ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಸಂತ ಶ್ರೇಷ್ಠ ಕನಕ ದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಶಶಿಧರ್ ಪಿ.ದೀಪು ಪುಷ್ಪಾರ್ಚನೆ ನೆರವೇರಿಸಿದರು.  ಪುರಸಭೆ ಅಧ್ಯಕ್ಷ ಶಶಿಧರ್ ಪಿ.ದೀಪು ಮಾತನಾಡಿ ಕನಕದಾಸರು  ಕೀರ್ತನೆಗಳ ಮೂಲಕ  ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ತಿಳಿಸಿದರು. 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು ಎಂದು ತಿಳಿಸಿದರು.  ಪುರಸಭೆ ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ ಸದಸ್ಯರಾದ ಮಧುಸೂದನ್ ಮಹಮ್ಮದ್ ಇಲಿಯಾಸ್ ಎನ್.ಕುಮಾರ್ ನಿರ್ಮಲ ಅಣ್ಣಯ್ಯಸ್ವಾಮಿ ಸುರೇಶ್ ಕಾರ್ಗಳ್ಳಿ ಮಹದೇವನಾಯಕ ಪುರಸಭೆ ಮುಖ್ಯಾಧಿಕಾರಿ ಶರವಣ ಮುಖಂಡರಾದ ರಘು ವಿಶ್ವನಾಥ್ ಅರುಣ್ ಚಿಟ್ಟೆ ಪ್ರತಾಪ್ ಪುರಸಬೆ ಸಿಬ್ಬಂದಿ ಮಹೇಶ್ ಪರಮೇಶ್ ಕಿರಣ್ ಪುಟ್ಟಸ್ವಾಮಿ ರಮೇಶ್ ಸಿದ್ದರಾಜು ಮೂರ್ತಿ ಭಾಗವಹಿಸಿದ್ದರು.

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.