ಮಹದೇಶ್ವರ ಬೆಟ್ಟ: ಇಲ್ಲಿನ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಪ್ರಥಮ ಏಕಾದಶಿಯ ಪ್ರಯುಕ್ತ ಬುಧವಾರ ಬೇಡಗಂಪಣ ಆಚರಣೆಯಂತೆ ಕಾವೇರಿ ನದಿ ಪೂಜೆ, ಬಾಗೀನ ಸಮರ್ಪಣೆ ಜೊತೆಗೆ ಕಾವೇರಿ ಜಲಾಭಿಷೇಕ ಮಜ್ಜನ ಸೇವೆ ಮಾಡಲಾಯಿತು.
ಬೇಡಗಂಪಣ ಕುಲದವರಿಂದ ವರ್ಷಕ್ಕೊಮ್ಮೆ ಸಾಂಪ್ರದಾಯಿಕವಾಗಿ ಈ ಸೇವೆ ಜರುಗುತ್ತದೆ. ಬುಧವಾರ ಬೆಳಿಗ್ಗೆ ಬೇಡಗಂಪಣ ಕುಲದವರು ಉಪವಾಸ ಕೈಗೊಂಡು ಪಾಲಾರ್ ಬಳಿ ಹರಿಯುತ್ತಿರುವ ಕಾವೇರಿ ನದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಜಲವನ್ನು ತಂದು ದೇವಾಲಯದ ಒಳ ಆವರಣದಲ್ಲಿ ಇಟ್ಟು ವಿಶೇಷ ಪೂಜೆ ಮಾಡಿದರು. ಬಳಿಕ ಮಂಗಳವಾದ್ಯಗಳ ಸಮೇತ ದೇವಾಲಯವನ್ನು ಮೂರು ಬಾರಿ ಪ್ರದಕ್ಷಿಣೆಯನ್ನು ಮಾಡಿ ನಂತರ ಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.