ADVERTISEMENT

ಕೊಳ್ಳೇಗಾಲ | ಪಿಸ್ತೂಲ್‌, ಹತ್ತು ಸಜೀವ ಗುಂಡು ವಶ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 13:21 IST
Last Updated 30 ಏಪ್ರಿಲ್ 2025, 13:21 IST
ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಸಮೀಪದ ಉತ್ತಂಬಳ್ಳಿ ವೃತ್ತದಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದಿರುವ ಪಿಸ್ತೂಲು
ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಸಮೀಪದ ಉತ್ತಂಬಳ್ಳಿ ವೃತ್ತದಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದಿರುವ ಪಿಸ್ತೂಲು   

ಕೊಳ್ಳೇಗಾಲ: ತಾಲ್ಲೂಕಿನ ಮಾಂಬಳ್ಳಿ ಸಮೀಪದ ಉತ್ತಂಬಳ್ಳಿ ವೃತ್ತದಲ್ಲಿ ಮಂಗಳವಾರ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಬಂಧಿಸಿ ಪಿಸ್ತೂಲ್ ಹಾಗೂ 10 ಸಜೀವ ಗುಂಡುಗಳನ್ನು ಮಾಂಬಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ‌ಕಲ್ಯಾಣಗಿರಿಯ ತೌಫೀಕ್ ಅಹಮದ್ ಹಾಗೂ ಮಾಂಬಳ್ಳಿ ಗ್ರಾಮದ ಮಹಮ್ಮದ್ ಅರ್ಷದುಲ್ಲಾ ಆರೋಪಿಗಳು. ಖಚಿತ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್‌ ಆರ್.ಶ್ರೀಕಾಂತ್ ನೇತೃತ್ವದ ತಂಡ ಮೈಸೂರು–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಕೂಡುವ ಉತ್ತಂಬಳ್ಳಿ ವೃತ್ತದ ಬಳಿ ತೌಫಿಕ್ ಮತ್ತು ಮಹಮ್ಮದ್ ಎಂಬುವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಗನ್ ಮತ್ತು ಗುಂಡುಗಳು ಪತ್ತೆಯಾಗಿವೆ.

ಆರೋಪಿಗಳು ಪರವಾನಗಿ ಇಲ್ಲದೆ ಗನ್ ಬಳಕೆ ಮಾಡುತ್ತಿರುವುದು ತನಿಖೆ ವೇಳೆ ತಿಳಿದುಬಂದಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ದಾಳಿ ವೇಳೆ ಎಎಸ್‌ಐ ಶಕೀವುಲ್ಲಾ, ವೆಂಕಟೇಶ್, ಬಿಳಿಗೌಡ, ಕಿಶೋರ್, ಶಿವಕುಮಾರ ಭಾಗವಹಿಸಿದ್ದರು.

ADVERTISEMENT
ಆರೋಪಿಗಳಿಂದ ವಶಕ್ಕೆ ಪಡೆದಿರುವ ಸಜೀವ ಗುಂಡುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.