ADVERTISEMENT

ಕೊಳ್ಳೇಗಾಲ: ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ: ಬಂಧನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:48 IST
Last Updated 12 ಆಗಸ್ಟ್ 2025, 7:48 IST
ವಿನಯ್  
ವಿನಯ್     

ಕೊಳ್ಳೇಗಾಲ: ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮತ್ತು ಚಾಲಕನ ಮೇಲೆ ನಗರದ ಶಂಕರಪುರ ಬಡಾವಣೆಯ ವಿನಯ್ ಎಂಬಾತ ಸೋಮವಾರ ರಾತ್ರಿ ಹಲ್ಲೆ ಮಾಡಿದ್ದು, ದೂರು ದಾಖಲಾಗಿದೆ.

ಬಸ್ ಕಂಡಕ್ಟರ್ ಉಮ್ಮತ್ತೂರು ನಾಗರಾಜು ಮತ್ತು ಚಾಮರಾಜನಗರ ಕುಂಬೇಶ್ವರ ಕಾಲೊನಿ ಚಾಲಕ ಪ್ರಭಾಕರ್ ಹಲ್ಲೆಗೊಳಗಾದವರು.

ಇಲ್ಲಿನ ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಚಾಮರಾಜನಗರಕ್ಕೆ ಹೊರಟ್ಟಿದ್ದ ಬಸ್‌ನ ಮುಂದೆ ಅಡ್ಡಲಾಗಿ ನಿಂತಿದ್ದ ವಿನಯ್‌ನನ್ನು ದಾರಿ ಬಿಡುವಂತೆ ಚಾಲಕ ಹಾಗೂ ಕಂಡಕ್ಟರ್ ಕೇಳಿದರು, ಮದ್ಯಪಾನದ ಅಮಲಿನಲ್ಲಿ ವಿನಯ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.