ADVERTISEMENT

ಕೂಲಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 14:01 IST
Last Updated 24 ಜನವರಿ 2025, 14:01 IST

ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಬೆಳಗಾವಿ ಮೂಲದ ನಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ  ಬೆಳಗಾವಿಯ ನಾಗಪ್ಪನಾಯಕ (53) ಶುಕ್ರವಾರ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.
 

 ಮೂಲತಃ ಬೆಳಗಾವಿಯವರಾದ ಈತ ಆಗಾಗ ಪಾಳ್ಯ ಗ್ರಾಮಕ್ಕೆ ಆಗಮಿಸಿ ಪ್ಲಂಬಿಂಗ್ ಕೆಲಸ ಮಾಡಿ  ವಾಪಸಾಗುತ್ತಿದ್ದರು. ಗುರುವಾರ ಕೆಲಸ ಮುಗಿಸಿಕೊಂಡು ಸಂಜೆ ಬಸ್ ನಿಲ್ದಾಣ ಸಮೀಪದ ಅಂಗಡಿ ಮುಂದೆ ಮಲಗಿದ್ದರು. ಶುಕ್ರವಾರ ಬೆಳಿಗ್ಗೆ ಈತ ಕೆಲಸಕ್ಕೆ ತೆರಳದ ಹಿನ್ನೆಲೆ ಹೋಗಿ ನೋಡಿದ್ದಾರೆ ಆ ಸಂದರ್ಭದಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ನಂತರ ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದು ಮೃತರ ಅಣ್ಣನ ಮಗ ಪರಶುರಾಮ್ ಗ್ರಾಮಾಂತರ ಠಾಣೆಯಲ್ಲಿ ಘಟನೆ ಕುರಿತು ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT