
ಪ್ರಜಾವಾಣಿ ವಾರ್ತೆ
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮವಾದ ಪೊನ್ನಾಚ್ಚಿಯಲ್ಲಿ ಚಿರತೆ ದಾಳಿಯಿಂದ ಹಸುವಿಗೆ ತೀವ್ರ ಗಾಯವಾಗಿದೆ.
ಗ್ರಾಮದ ರೈತ ಮಹದೇವಸ್ವಾಮಿ ಜಮೀನಿನಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿದೆ. ಈಚೆಗೆ ತಾಳುಬೆಟ್ಟದಿಂದ ಪಾದಯಾತ್ರೆ ಹೋಗುತ್ತಿದ್ದ ಭಕ್ತನೊಬ್ಬ ಚಿರತೆಯ ದಾಳಿಯಿಂದ ಮೃತರಾಗಿದ್ದು, ಭೀತಿಯಲ್ಲಿದ್ದ ಸ್ಥಳೀಯರನ್ನು ಈ ಘಟನೆ ಇನ್ನೂ ಕಂಗೆಡಿಸಿದೆ.
ಹಸುವಿನ ಮೇಲೆ ದಾಳಿ ಮಾಡಿದ ಚಿರತೆಯನ್ನು ಸೆರೆಹಿಡಿಯುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.