ADVERTISEMENT

ಚಾಮರಾಜನಗರ | ವಿಷಪ್ರಾಷನದಿಂದ ಚಿರತೆ ಹತ್ಯೆ: ಬಂಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 8:24 IST
Last Updated 16 ಜನವರಿ 2026, 8:24 IST
ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ಚಿರತೆಗೆ ವಿಷಹಾಕಿ ಕೊಂದ ಆರೋಪದ ಮೇಲೆ ಗ್ರಾಮದ ದೊರೆಸ್ವಾಮಿ ಎಂಬುವರನ್ನು ಬಂಧಿಸಲಾಗಿದೆ.
ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ಚಿರತೆಗೆ ವಿಷಹಾಕಿ ಕೊಂದ ಆರೋಪದ ಮೇಲೆ ಗ್ರಾಮದ ದೊರೆಸ್ವಾಮಿ ಎಂಬುವರನ್ನು ಬಂಧಿಸಲಾಗಿದೆ.   

ಚಾಮರಾಜನಗರ: ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ಚಿರತೆಗೆ ವಿಷಹಾಕಿ ಕೊಂದ ಆರೋಪದ ಮೇಲೆ ಗ್ರಾಮದ ದೊರೆಸ್ವಾಮಿ ಎಂಬಾತನನ್ನು ಬಂಧಿಸಲಾಗಿದೆ.

5 ರಿಂದ 6 ವರ್ಷದ ಗಂಡು ಚಿರತೆ ವಿಷಪ್ರಾಷನದಿಂದ ಸಾವನ್ನಪ್ಪಿರುವುದು ಖಚಿತವಾಗುತ್ತಿದ್ದಂತೆ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳ ತಂಡ ತನಿಖೆ ನಡೆಸಿ ಹೊಮ್ಮ ಗ್ರಾಮದಲ್ಲಿ ಆರೋಪಿ ದೊರೆಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 ಬುಧವಾರ ಚಿರತೆಯ ಕಳೇಬರ ಸಿಕ್ಕಿದ್ದ ಸಮೀಪದಲ್ಲಿ ಕರುವೊಂದರ ಕಳೇಬರವೂ ಸಿಕ್ಕಿತ್ತು. ಮೇಲ್ನೋಟಕ್ಕೆ ವಿಷಪ್ರಾಷನಿಂದ ಚಿರತೆ ಮೃತಪಟ್ಟಿರಬಹುದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ಚಿರತೆ ಹಾಗೂ ಕರುವಿನ ದೇಹದ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.