ADVERTISEMENT

ಚಿರತೆ ಪ್ರತ್ಯಕ್ಷ: ಭಯದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:54 IST
Last Updated 13 ಜೂನ್ 2025, 15:54 IST
ಚಿರತೆ ಹೆಜ್ಜೆ ಗುರುತು.
ಚಿರತೆ ಹೆಜ್ಜೆ ಗುರುತು.   

ಗುಂಡ್ಲುಪೇಟೆ: ಪಟ್ಟಣದ ದೊಡ್ಡಕೆರೆ ಏರಿ ಮೇಲೆ ಹಗಲಿನ ವೇಳೆ ಚಿರತೆ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.

ಪಟ್ಟಣದ ದೊಡ್ಡಕೆರೆ ಮತ್ತು ಚಿಕ್ಕಕೆರೆ ಏರಿಯ ಆಸುಪಾಸಿನಲ್ಲಿ ಕೆಲ ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜಮೀನುಗಳಲ್ಲಿ ಹೆಜ್ಜೆ ಗುರುತು ಮೂಡುತ್ತಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಚಿರತೆ ಏರಿ ಮೇಲೆ ಓಡಾಟ ನಡೆಸಿದೆ. ಈ ದೃಶ್ಯವನ್ನು ರೈತ ರಂಗಸ್ವಾಮಿ ಎಂಬುವರು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದರಿಂದ ರೈತರು ಜಮೀನು, ತೋಟಗಳಲ್ಲಿ ಕೃಷಿ ಚಟುವಟಿಕೆಗೆ ಹೋಗಲು ಹಿಂದೇಟು ಹಾಕುತಿದ್ದಾರೆ.

ದೊಡ್ಡಕೆರೆ ಏರಿಯ ಬಳಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಜಮೀನುಗಳಿಗೆ ಹೋಗಲು ರೈತರು ಭಯ ಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಅಳವಡಿಸಿ ಚಿರತೆ ಸೆರೆ ಹಿಡಿಯುವಂತೆ ರೈತ ಮಹೇಶ್, ತ್ಯಾಗರಾಜ್ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.