ADVERTISEMENT

ಚಾಮರಾಜನಗರ: ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 13:13 IST
Last Updated 27 ಜೂನ್ 2023, 13:13 IST
   

ಚಾಮರಾಜನಗರ: ಎರಡು ನಿವೇಶನಗಳ ಜಂಟಿ ಖಾತೆ ಮಾಡಿಸಿಕೊಡಲು ₹20 ಸಾವಿರ ಲಂಚ ಕೇಳಿದ ಇಲ್ಲಿನ ನಗರಸಭೆಯ ಕಂದಾಯ ಅಧಿಕಾರಿ ನಾರಾಯಣ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. 

ನಗರದ ಭ್ರಮರಾಂಬ ಬಡಾವಣೆಯ ನಿವಾಸಿ ಮಾದೇಗೌಡ ಅವರು ನಿವೇಶನಗಳ ಜಂಟಿ ಖಾತೆ ಮಾಡಿಸಲು ನಗರಸಭೆಯಲ್ಲಿ ಅರ್ಜಿ ಹಾಕಿದ್ದರು. ನಾರಾಯಣ ಅವರು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 

ಈ ಸಂಬಂಧ ಮಾದೇಗೌಡ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕಂದಾಯ ಅಧಿಕಾರಿ ನಾರಾಯಣ ಅವರು 18ನೇ ವಾರ್ಡ್‌ನಲ್ಲಿರುವ ತಮ್ಮ ಮನೆಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ, ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. 

ADVERTISEMENT

ನಂತರ ಪೊಲೀಸರು ಅವರನ್ನು ನಗರಸಭೆ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು.

‘ನಾರಾಯಣ ಅವರನ್ನು ಬಂಧಿಸಿ ₹20 ಸಾವಿರ ನಗದು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ‍ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.