ADVERTISEMENT

ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಕ್ರಮ: ಶಾಸಕ ಎಂ. ಆರ್ ಮಂಜುನಾಥ್.

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:40 IST
Last Updated 14 ಅಕ್ಟೋಬರ್ 2025, 4:40 IST
ನಾಗಮಲೆ ಭವನದಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷದ ಕುರಿತು ನಡೆದ ಸಭೆ
ನಾಗಮಲೆ ಭವನದಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷದ ಕುರಿತು ನಡೆದ ಸಭೆ   

ಮಹದೇಶ್ವರ ಬೆಟ್ಟ: ಮಾನವ, ವನ್ಯಜೀವಿ ಸಂಘರ್ಷ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕರ್ಮಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕ ಎಂ. ಆರ್ ಮಂಜುನಾಥ್.

ಮಹದೆಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಹದೇಶ್ವರ ವನ್ಯ ಜೀವಿ ವಲಯದಲ್ಲಿ ಇರುವ ಪ್ರಾಣಿಗಳು ಹಾಗೂ ಯಾವ ಪ್ರಾಣಿಗಳಿಂದ ಮಾನವ ಸಂಘರ್ಷವಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದರು ಅಧಿಕಾರಿಗಳು ಮಹದೆಶ್ವರ ವನ್ಯಜೀವಿ ವಲಯದಲ್ಲಿ ಇರುವ ಪ್ರಾಣಿಗಳ ಸಂಪೂರ್ಣಮಾಹಿತಿಯನ್ನು ವಿವರಿಸಿ ಇಲ್ಲಿಯವರೆಗೆ ಹುಲಿ ಯಾವುದೇ ಮಾನವನ ಮೇಲೆ ದಾಳಿ ಮಾಡಿಲ್ಲ ಅರಣ್ಯದಲ್ಲಿರುವ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಆಹಾರವನ್ನು ತಿನ್ನುತ್ತದೆ. ಇತ್ತೀಚಿನ ದಿನಗಳಲ್ಲಿ ಎತೇಚ್ಚವಾಗಿ ದನಕರುಗಳು ಕಾಡಿಗೆ ತೆರಳುವ ಸಂಧರ್ಭದಲ್ಲಿ ಹಸುವನ್ನು ಸುಲಭವಾಗಿ ಬೇಟೆ ಮಾಡುತ್ತದೆ. ಸಾಮಾನ್ಯವಾಗಿ ಚಿರತೆಗಳು ಕುರಿ ದೊಡ್ಡಿ, ದಾಳಿ ಮಾಡಿರುವ ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿಯನ್ನು ನೀಡಿದರು.

ಮಾಹಿತಿಯನ್ನು ಪಡೆದ ಶಾಸಕರು ಇದನ್ನು ಮುಕ್ತವಾಗಿ ಚರ್ಚಿಸಿ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕು ಈಗಾಗಲೆ ಮಹದೇಶ್ವರ ವನ್ಯ ಜೀವಿ ವಲಯದಲ್ಲಿ ಹುಲಿ ಸಾವಿನ ಪ್ರಕರಣ ನಡೆದಿದ್ದು, ಮಾನವ ಮತ್ತೆ ವನ್ಯ ಜೀವಿ ಒಂದುಭಾಗವಾದರೆ ವನ್ಯ ಜೀವಿ ಹಾಗೂ ಅರಣ್ಯ ಒಂದುಬಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಏನು ಮಾಡಲು ಹಿಂಜರಿಯುವುದಿಲ್ಲ ೆಂಬುದು ನಮ್ಮ ಕಣ್ಣಮುಂದೆ ನಡೆದಿದೆ. ಇದು ಮರುಕಳಿಸಬಾರದು. ಹನೂರು ತಾಲೂಕಿನಾಧ್ಯಂತ ವಾಸವಾಗಿರುವ ರೈತರನ್ನು ಸಂಪರ್ಕಿಸಿ ಅವರು ಸಾಕಾಣೆ ಮಾಡುತ್ತಿರುವ ಜಾನುವಾರುಗಳನ್ನು ಸಮೀಕ್ಷೆ ನಡೆಸಿ ಪ್ರತಿ ಜಾನುವಾರು ಅಥವಾ ಕುರಿ ಮೇಕೆಗಳಿಗೆ ಪಾಲಿಸಿಯನ್ನು ಮಾಡಿಸಿ ಜಾನುವಾರುಗಳು ಮರಣಹೊಂದಿದರೆ ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಅಥವಾ ಅರಣ್ಯದಲ್ಲಿ ಮೃತವಾದ ಜಾನುವಾರುಗಳಿಗೆ ಅರಣ್ಯ ಇಲಾಖೆವತಿಯಿಂದ ಪರಿಹಾರವನ್ನು ನೀಡಲು ಮುಂದಾದರೆ ಅವರ ಮನಸ್ಸಿಗೆ ಒಂದು ರೀತಿಯಾದ ಸಮಾದಾನವಾಗುತ್ತದೆ. ಹಾಗೂ ರೈತರಿಗೆ ಜಾನುವಾರುಗಳೆ ಮುಖ್ಯ ಜೀವನಾದಾರವಾಗಿರುವುದರಿಂದ ತಮ್ಮ ಜಾನುವಾರುಗಳನ್ನು ಕಳೆದುಕೊಂಡ ರೈತ ಸಾವಿಗೆ ಕಾರಣವಾದವರ ಮೇಲೆ ಸೇಡು ತೀರಿಸಿಕಳ್ಳುವುದು ಸಹಜ ಆದುದರಿಂದ ಸಂಭಂಧಪಟ್ಟ ಅಧಿಕಾರಿಗಳು ಸ್ಥಳಿಯವಾಗಿ ವಾಸವಾಗಿರುವ ಜಾನುವಾರುಗಳ ಗಣತಿಯನ್ನು ಮಾಡಿ ಸ್ವಂತ ಜಾನುವಾರುಗಳು ಹಾಗೂ ಮಾಸಿಕ ಆಧಾರದ ಮೇಲೆ ಸಾಕಾಣೆ ಮಾಡುತ್ತಿರುವ ಜಾನುವಾರುಗಳು ಇನ್ನಿತರ ಮಾಹಿತಿಗಳನ್ನು ಕಲೆ ಹಾಕಿ ಮಾಹಿತಿಯನ್ನು ಸಂಗ್ರಹಿಸಿ ಮುಂದಿನ ಹಂತದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಹಾಗೂ ಅರಣ್ಯ ಅಧಿಕಾರಿಗಳ ಜೊತೆ ಸಮಗ್ರವಾಗಿ ಚರ್ಚಿಸಿ ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ADVERTISEMENT

ಸಭೆಯಲ್ಲಿ ಡಿಸಿಫ್ ಭಾಸ್ಕರ್, ಎಸಿಎಫ್, ಪ್ರಧಿಕಾರದ ಕಾರ್ಯದರ್ಶಿ ರಘು, ಪಶು ಇಲಾಖೆಯ ಡಿಡಿ ಮಂಜುನಾಥ್, ಎಇಇ ಸುದನ್ವನಾಗ್, ತಾಲೂಕು ಕಾರ್ಯನಿರ್ವಹನ ಅಧಿಕಾರಿ ಉಮೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಕಂದಾಯ, ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.