ADVERTISEMENT

ಉಮೇಶ್ ಕುದರ್‌ ಅಧ್ಯಕ್ಷ; ಸಿ.ಕೆ.ಮಂಜುನಾಥ್ ಕಾರ್ಯಾಧ್ಯಕ್ಷ

ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ರಚನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:13 IST
Last Updated 10 ಡಿಸೆಂಬರ್ 2025, 3:13 IST
ಚಾಮರಾಜನಗರ ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷರಾಗಿ ಉಮೇಶ್ ಕುದರ್, ಕಾರ್ಯಾಧ್ಯಕ್ಷರಾಗಿ ಸಿ.ಕೆ.ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪ್ರಸಾದ್ ಆಯ್ಕೆಯಾದರು
ಚಾಮರಾಜನಗರ ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷರಾಗಿ ಉಮೇಶ್ ಕುದರ್, ಕಾರ್ಯಾಧ್ಯಕ್ಷರಾಗಿ ಸಿ.ಕೆ.ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪ್ರಸಾದ್ ಆಯ್ಕೆಯಾದರು   

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷರಾಗಿ ಉಮೇಶ್ ಕುದರ್, ಕಾರ್ಯಾಧ್ಯಕ್ಷರಾಗಿ ಸಿ.ಕೆ.ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.

ನಗರದ ಡಾ. ಬಿ.ಆರ್.ಅಂಭೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಮುಖಂಡರು, ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗಡಿಕಟ್ಟೆಗಳ ಯಜಮಾನರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಪರಿಶಿಷ್ಟ ಜಾತಿ ಬಲಗೈ ಸಮುದಾಯವನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ರಚನೆ ಮಾಡುವ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳು ಈಗಾಗಲೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಕೇಂದ್ರದಲ್ಲಿ ಸಂಘಟನೆ ಬಲಗೊಳ್ಳಬೇಕಿದೆ. ಹಾಗೆಯೇ ತಾಲ್ಲೂಕು ಕೇಂದ್ರದಲ್ಲಿ ಎಲ್ಲರನ್ನೂ ಒಳಗೊಂಡಂತೆ ಸಂಘಟನೆ ರಚನೆ ಮಾಡಿ, ಒಂದೇ ವೇದಿಕೆಯಲ್ಲಿ ಹೋರಾಟ ನಡೆಯಬೇಕಿದೆ. ಸಮುದಾಯದ ಸಮಸ್ಯೆಗಳ ಪರವಾಗಿ, ಅನ್ಯಾಯದ ವಿರುದ್ಧವಾಗಿ ಗಟ್ಟಿಧ್ವನಿಯಾಗಿ ಹೋರಾಟ ಮಾಡಿ ನ್ಯಾಯ ಪಡೆಯಬೇಕು. ಈ ನಿಟ್ಟಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾ ರಚನೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ADVERTISEMENT

ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿ, ಸಂಘಟನೆಗಳು ವಿಘಟನೆಗೊಂಡ ಪರಿಣಾಮ ಹೋರಾಟದ ಕಿಚ್ಚು ಕ್ಷೀಣವಾಗುತ್ತಿದೆ. ಪರಿಣಾಮ ಅಂಬೇಡ್ಕರ್‌ ಪ್ರತಿಮೆ, ಫ್ಲೆಕ್ಸ್‌, ಭಾವಚಿತ್ರಗಳಿಗೆ ಅಪಮಾನ ಮಾಡುವಂತಹ ಪ್ರಕರಣಗಳು, ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪದಾಧಿಕಾರಿಗಳ ಆಯ್ಕೆ:

ಚಾಮರಾಜನಗರ ತಾಲ್ಲೂಕು ಡಾ.ಬಿ.ಆರ್. ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷರಾಗಿ ಉಮೇಶ್ ಕುದರ್, ಕಾರ್ಯಾಧ್ಯಕ್ಷರಾಗಿ ಸಿ.ಕೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪ್ರಸಾದ್, ಗೌರವ ಅಧ್ಯಕ್ಷರಾಗಿ ಸಿ.ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಕಾಗಲವಾಡಿ ಶಿವಸ್ವಾಮಿ, ಬಸವನಪುರ ಸಿದ್ದರಾಜು, ರೇಚಂಬಳ್ಳಿ ಕುಮಾರ್, ದೇವಲಾಪುರ ಶಿವಣ್ಣ, ಸಂಘಟನಾ ಕಾರ್ಯದರ್ಶಿಗಳಾಗಿ ರಾಮಸಮುದ್ರ ಬಾಬು, ಹೊಂಡರಬಾಳು ವಾಸು, ಸಿದ್ದಯ್ಯನಪುರ ಶಿವರಾಜು, ಸಹ ಕಾರ್ಯದರ್ಶಿಗಳಾಗಿ ಮೋಹನ್ ನ‌ಗು, ರಮೇಶ್, ನಾಗವಳ್ಳಿ ಪ್ರಶಾಂತ್, ನಲ್ಲೂರು ಮಾಧುರಾವ್, ಬಸವನಪುರ ನಾಗರಾಜು, ರಾಮಸಮುದ್ರ ಸುರೇಶ್, ಸಂಚಾಲಕರಾಗಿ ಕೆರೆಹಳ್ಳಿ ರಾಜಕುಮಾರ್, ಪತ್ರಿಕಾ ಸಲಹೆಗಾರರಾಗಿ ವಿ.ಗಂಗಾಧರ್, ಪ್ರಶಾಂತ್ ಹಾಗೂ ಗೌರವ ಸಲಹೆಗಾರರಾಗಿ ತಾಲ್ಲೂಕಿನ ಗಡಿ ಕಟ್ಟೆಮನೆ ಯಜಮಾನರನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.