ADVERTISEMENT

ದಲಿತ ಸಂಘಟನೆಗಳ ಒಕ್ಕೂಟದಿಂದ ಮಹಿಷ ದಸರಾ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 15:18 IST
Last Updated 5 ಅಕ್ಟೋಬರ್ 2019, 15:18 IST
ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ಮಹಿಷ ದಸರಾ ಆಚರಿಸಿತು
ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ಮಹಿಷ ದಸರಾ ಆಚರಿಸಿತು   

ಚಾಮರಾಜನಗರ: ದಸರಾ ಉತ್ಸವಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳ ಒಕ್ಕೂಟವು ಶನಿವಾರ ನಗರದಲ್ಲಿ ಮಹಿಷ ದಸರಾ ಆಯೋಜಿಸಿತ್ತು.ಕಾರ್ಯಕ್ರಮದ ಅಂಗವಾಗಿ ಮಹಿಷಾಸುರನ ಮೆರವಣಿಗೆ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿ ಮಹಿಷಾಸುರನ ಭಾವಚಿತ್ರವನ್ನು ಅನಾವರಣಗೊಳಿಸಿದ ಒಕ್ಕೂಟದ ಪದಾಧಿಕಾರಿಗಳು, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಒಕ್ಕೂಟದ ಪಿ.ಸಂಘಸೇನಾ, ‘ಸರ್ಕಾರ, ಸಂಘ-ಸಂಸ್ಥೆಗಳು ನಿಜವಾಗಲೂ ಮಹಿಷ ದಸರಾ ಆಚರಣೆ ಮಾಡಬೇಕಿತ್ತು. ಬದಲಾಗಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹವಿಟ್ಟು ದಸರಾ ಮಾಡುತ್ತಿರುವುದು ಇತಿಹಾಸ ತಿರುಚುವ ಕೆಲಸ. ಮೂಲ ನಿವಾಸಿಗಳ ದೊರೆ ಮಹಿಷಾಸುರ, ಮಹಿಷ ಮಂಡಲವಾಗಿದ್ದ ಮೈಸೂರಿಗೆ ಮಹಿಷಾಸುರನಿಂದಾಗಿ ಮೈಸೂರು ಎಂಬ ಹೆಸರು ಬಂದಿದೆ’ ಎಂದರು.

ADVERTISEMENT

‘ಮುಂದಿನ ವರ್ಷದಿಂದ ನಮ್ಮ ಸಂಘಟನೆಗಳ ವತಿಯಿಂದ ಚಾಮರಾಜನಗರದಲ್ಲಿ ಮಹಿಷ ದಸರಾವನ್ನು ಅದ್ಧೂರಿಯಾಗಿ ಮಾಡಲಾಗುವುದು’ ಎಂದರು.

ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮೆರವಣಿಗೆ ರಾಮಸಮುದ್ರದ ಬಳಿ ಇರುವ ಅಂಬೇಡ್ಕರ್‌ ಪ್ರತಿಮೆಯ ಬಳಿ ಮುಕ್ತಾಯ ಕಂಡಿತು.

ಒಕ್ಕೂಟದ ಸಿ.ಎಂ.ಶಿವಣ್ಣ, ಕೆ.ಎಂ.ನಾಗರಾಜು, ಯರಿಯೂರು ರಾಜಣ್ಣ, ಅರಕಲವಾಡಿ ನಾಗೇಂದ್ರ, ಗಂಗವಾಡಿ ಸೋಮಣ್ಣ, ರಾಮಸಮುದ್ರ ಸುರೇಶ್, ಕಂದಹಳ್ಳಿ ನಾರಾಯಣ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.