
ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಮಾರಮ್ಮ ದೇವಿ ಪುನರ್ ಪ್ರತಿಷ್ಠಾಪನೆ, ವಿಮಾನಗೋಪುರ ಶಂಕುಸ್ಥಾಪನೆ, ಮಾರಮ್ಮ ದೇವಾಲಯ ಉದ್ಘಾಟನೆ ಕಾರ್ಯಕ್ರಮಗಳು ಜ.18 ರಿಂದ 20ರ ವರೆಗೆ ನಡೆಯಲಿವೆ.
ಎಲ್ಲಾ ಸಮುದಾಯದ ಮುಖಂಡರು ಸಭೆ ಸೇರಿ ಜನರಿಂದ ಹಣ ಸಂಗ್ರಹಿಸಿ ಆದಿಶಕ್ತಿ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿಕೊಂಡು ದೇವಸ್ಥಾನವನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಲು ಒಮ್ಮತದಿಂದ ತೀರ್ಮಾನ ಕೈಗೊಂಡಿದ್ದರು.
ಸುಮಾರು ₹1.30 ಕೋಟಿ ವೆಚ್ಚದಲ್ಲಿ 1ವರ್ಷ 3 ತಿಂಗಳ ಅವಧಿಯಲ್ಲಿ ಸುಂದರವಾಗಿ ಬಹಳ ಅಚ್ಚುಕಟ್ಟಾಗಿ ಮಾರಮ್ಮನ ದೇವಸ್ಥಾನವು ನಿರ್ಮಾಣವಾಗಿದೆ. 18ರಂದು ಕಾವೇರಿ ನದಿಯಲ್ಲಿ ಮದ್ಯಾಹ್ನ 106 ಹೆಣ್ಣು ಮಕ್ಕಳಿಂದ ಹಾಲರವೆ ವೀರಗಾಸೆ ಚಿಕ್ಕರಸಿನಕೆರೆ ಬಸಪ್ಪನಿಗೆ ಪೂಜೆ ಸಲ್ಲಿಸಲಾಗುವುದು. ಮಂಗಳ ವಾದ್ಯದೊಡನೆ ಮೆರವಣಿಗೆಯು ದೇವಸ್ಥಾನಕ್ಕೆ ತಲುಪಿ ಸಂಜೆ 6.30ಕ್ಕೆ ಸಂಕಲ್ಪ ಗಣಪತಿ ಪೂಜೆ, ಹೋಮ ನಡೆಯಲಿದೆ. ನಂತರ ಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ.
19ರಂದು 6.30ಕ್ಕೆ ವೇದಪಾರಾಯಣ ಮಹಾಗಣಪತಿ ಕಳಸಾರ್ಚನೆ ನಡೆಯಲಿದೆ. ಪೀಠಪೂಜಾ ಯಂತ್ರಸ್ಥಾಪನೆ ಅಷ್ಟಬಂಧನ ಕಾರ್ಯದಿಂದ ದೇವಿ ಪ್ರತಿಷ್ಠಾಪನೆ ಇರಲಿದೆ. 20ರಂದು ಬೆಳಗ್ಗೆ 6 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.