ಚಾಮರಾಜನಗರ: ‘ಕನ್ನಡ ನಾಡು ಭಾಷೆ, ನೆಲ, ಜಲ ಸಂರಕ್ಷಣೆ, ಸಂಸ್ಕೃತಿ ಉಳಿಸುವಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರ ಮಹತ್ತರವಾದದ್ದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಹಳೇ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ಸೇನೆಯ ವತಿಯಿಂದ ಶುಕ್ರವಾರ ನಡೆದ ತೃತೀಯ ವರ್ಷದ ರಾಜ್ಯೋತ್ಸವ ಹಾಗೂ ಗಡಿನಾಡು ಕನ್ನಡ ಹಬ್ಬ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕನ್ನಡ ಉಳಿವಿಗೆ ಸಂಘಟನೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ. ಸಮಾಜದಲ್ಲಿ ಕನ್ನಡಪರ ಧ್ವನಿ ಎತ್ತಲು ಮುಂದಾಗಿವೆ. ಹೀಗಾಗಿ, ಕನ್ನಡಕ್ಕಾಗಿ ಹೋರಾಟ ಮಾಡುವ ಕನ್ನಡಪರ ಸಂಘಟನೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಸಮಾಜದ ಕೆಲಸ ಕೂಡ ಆಗಿದೆ. ಕರ್ನಾಟಕ ರಕ್ಷಣಾ ಸೇನೆಯು ರಾಜ್ಯದಾದ್ಯಂತ ಕನ್ನಡ ಭಾಷೆ, ಸಂಸ್ಕೃತಿ ಪರವಾಗಿ ಹೆಚ್ಚು ಹೆಚ್ಚು ಕೆಲಸಮಾಡಬೇಕು’ ಎಂದು ಸಲಹೆ ನೀಡಿದರು.
ಸಿದ್ಧಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷ ಚನ್ನಬಸವಸ್ವಾಮೀಜಿ ಮಾತನಾಡಿ, ‘ಕನ್ನಡ ಅಭಿಮಾನ ಎಲ್ಲರಲ್ಲೂ ಮೂಡಬೇಕು. ನಮ್ಮ ಕನ್ನಡ ಭಾಷೆ ಸಂಸ್ಕಾರ ಬೆಳೆಸುತ್ತದೆ.ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾದ ಸಂದರ್ಭದಲ್ಲಿಪ್ರಥಮವಾಗಿಹೋರಾಟ ಶುರುವಾಗುವುದುನಮ್ಮ ಗಡಿ ಜಿಲ್ಲೆಯಲ್ಲಿ ಈ ಸಂಘಟನೆ ನಾಡು, ನುಡಿಗೆ ಹೆಚ್ಚು ಒತ್ತು ನೀಡಲಿ’ ಎಂದರು.
ಸೇನೆಯ ರಾಜ್ಯಾಧ್ಯಕ್ಷ ಟಿ. ರಮೇಶ್‌ಗೌಡ ಮಾತನಾಡಿ, ‘ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಸಂಘಟನೆರೂಪಿಸಿಕನ್ನಡ ಪರವಾಗಿ ಅನೇಕ ಹೋರಾಟ ಮಾಡಲಾಗಿದೆ ಎಂದ ಅವರು, ಕರ್ನಾಟಕ ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.
‘ಕನ್ನಡ ಹಬ್ಬವನ್ನು ಪ್ರತಿ ಹಳ್ಳಿ ಹಳ್ಳಿಯಲ್ಲೂ ಆಚರಣೆ ಮಾಡಿ ಕನ್ನಡ ಜಾಗೃತಿ ಮೂಡಿಸಲಾಗುವುದು2 ಸಾವಿರ ಇತಿಹಾಸ ಹೊಂದಿದ್ದು, ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.
ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ಸೇನೆ ಬೆಂಗಳೂರು ನಗರ ಅಧ್ಯಕ್ಷೆ ಭಾರತೀಗೌಡ, ಕನಕಪುರ ತಾಲ್ಲೂಕು ಅಧ್ಯಕ್ಷ ನಟರಾಜು, ನಾಗರಾಜು, ಜಿಲ್ಲಾಧ್ಯಕ್ಷ ಮಿಂಚು ನಾಗೇಂದ್ರ, ಉಪಾಧ್ಯಕ್ಷ ಪಿ.ಮಹೇಶ್, ಗುರುಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರ, ಸಂಚಾಲಕ ಎಸ್. ಮಲ್ಲೇಶ್, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.