ಹನೂರು: ತಾಲ್ಲೂಕಿನ ಮಿಣ್ಯಂ ಹಾಗೂ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಅನುಕೂಲಕ್ಕಾಗಿ ಯರಂಭಾಡಿ ಹಾಗೂ ಕೊಪ್ಪ ಬಳಿ ಚೆಕ್ ಡ್ಯಾಂ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೇರವೇರಿಸಿದರು.
ಬಳಿಕ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆ ವತಿಯಿಂದ ತಲಾ ₹50 ಲಕ್ಷ ವೆಚ್ಚದಲ್ಲಿ ಯರಂಭಾಡಿ ಹಾಗೂ ಕೊಪ್ಪ ಬಳಿ ಚೆಕ್ ಡ್ಯಾಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೀಣ್ಯಂ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರೋಜ, ಸದಸ್ಯ ಬಸವಣ್ಣ, ಪಿಡಿಒ ಮಾದೇಶ್, ನೀರಾವರಿ ಇಲಾಖೆ ಎಇ ಅಭಿಲಾಶ್, ಎಇ ಪ್ರತಾಪ್, ಗುತ್ತಿಗೆದಾರರ ರಾಜಗೌಡ ಮಹೇಶ್, ಸ್ಥಳೀಯರಾದ ಚಿನ್ನವೆಂಕಟ ಚಂದ್ರು, ಸಿದ್ದಮರಿಯಪ್ಪ, ಹುಚ್ಚಯ್ಯ, ಗೋವಿಂದ ಗೌಡ,ನಾಗರಾಜು, ಮಹದೇವ ರಾಜಪ್ಪ ಮುನಿಯಪ್ಪ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.