ಚಾಮರಾಜನಗರ: ತಾಲ್ಲೂಕಿನ ಅಟ್ಟುಗೂಳಿಪುರ ಟೋಲ್‌ನಲ್ಲಿ ಸ್ಥಳೀಯರಿಂದ ಶುಲ್ಕ ವಸೂಲಿ ಮಾಡುತ್ತಿರುವ ಕ್ರಮ ಖಂಡಿಸಿ ಗೂಡ್ಸ್ ಆಟೊ ಮಾಲೀಕರು, ಚಾಲಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ ಮಾತನಾಡಿ, ಅಟ್ಟುಗೂಳಿಪುರ ಟೋಲ್ ಮಾರ್ಗವಾಗಿ ಸ್ಥಳೀಯ ರೈತರು, ಕಾರ್ಮಿಕರು, ಗೂಡ್ಸ್ ಆಟೊ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಸ್ಥಳೀಯರಿಂದ ಟೋಲ್ ಪಡೆಯುವುದು ಸರಿಯಲ್ಲ ಎಂದರು.
ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶಿಸಿ ಸ್ಥಳೀಯರಿಂದ ಟೋಲ್ ವಸೂಲಿಗೆ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೆಸ್ತೂರು ಮರಪ್ಪ, ಕನ್ನಹಳ್ಳಿ ಸೋಮಣ್ಣ, ಅಟೊ ಚಾಲಕರಾದ ವಿನೋದ್ ಕುಮಾರ್, ಲೋಹಿತ್, ರವಿ, ಜಗದೀಶ್, ಚಂದನ್, ಮಹೇಶ್, ಸಿದ್ದು, ಮಹೇಂದ್ರ, ರಮಿಜ್ ರಮೇಶ್, ವಿಶಾಲ್, ಮಹೇಶ್ ,ವಿಕ್ರಂ, ಆಕಾಶ್ ,ಲಿಂಗಪ್ಪ, ಸಿದ್ದರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.