ADVERTISEMENT

ಹೈಮಾಸ್ಟ್‌ ದುರಸ್ತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಮೇ 2019, 13:15 IST
Last Updated 8 ಮೇ 2019, 13:15 IST
ಹೈಮಾಸ್ಟ್‌ ದೀಪಗಳನ್ನು ದುರಸ್ತಿ ಮಾಡುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು
ಹೈಮಾಸ್ಟ್‌ ದೀಪಗಳನ್ನು ದುರಸ್ತಿ ಮಾಡುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು   

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯ ಡಿವೈಎಸ್‌ಪಿ ಕಚೇರಿ ಬಳಿಯಲ್ಲಿ 20 ದಿನಗಳಿಂದ ಹಾಳಾಗಿದ್ದ ಹೈಮಾಸ್ಟ್‌ಗಳನ್ನು ದುರಸ್ತಿ ಮಾಡಲು ನಗರಸಭೆ ಕ್ರಮ ಕೈಗೊಂಡಿದೆ.

ಹೈಮಾಸ್ಟ್‌ ದೀಪ ಉರಿಯದೆ ಇರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯ ಮೇ 7ರ ಸಂಚಿಕೆಯ ‘ಕುಂದುಕೊರತೆ’ ಅಂಕಣದಲ್ಲಿ ಓದುಗರೊಬ್ಬರು ಬೆಳಕು ಚೆಲ್ಲಿದ್ದರು.

20 ದಿನಗಳ ಹಿಂದೆ ದೀಪಗಳನ್ನು ಇಳಿಬಿಡಲಾಗಿತ್ತು. ಆದರೆ, ದುರಸ್ತಿ ಮಾಡಿರಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ, ಬುಧವಾರ ದೀಪಗಳ ದುರಸ್ತಿಗೆ ಕ್ರಮ ಕೈಗೊಂಡಿದೆ. ಕೆಟ್ಟು ಹೋದ ದೀಪಗಳನ್ನು ಸಿಬ್ಬಂದಿ ಬದಲಿಸುತ್ತಿದ್ದುದು ಕಂಡು ಬಂತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.