ADVERTISEMENT

ಕೊಳ್ಳೇಗಾಲ: ಸ್ನೇಕ್ ಬಾಬುರಿಂದ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:22 IST
Last Updated 25 ಸೆಪ್ಟೆಂಬರ್ 2025, 5:22 IST
ಉರಗತಜ್ಞ ಸ್ನೇಕ್ ಬಾಬು ಹೆಬ್ಬಾವನ್ನು ಹಿಡಿದಿರುವುದು
ಉರಗತಜ್ಞ ಸ್ನೇಕ್ ಬಾಬು ಹೆಬ್ಬಾವನ್ನು ಹಿಡಿದಿರುವುದು   

ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯ ಗ್ರಾಮದ ಜಮೀನೊಂದರಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಭಾರಿ ಗಾತ್ರದ ಹೆಬ್ಬಾವು ಬುಧವಾರ ಪತ್ತೆಯಾಗಿದೆ.

ಗ್ರಾಮದ ರಾಜೇಂದ್ರ ಎಂಬ ರೈತರ ಜಮೀನಿನಲ್ಲಿ ಕೂಲಿ ಕಾರ್ಮಿಕರು ಕಬ್ಬು ಕಟಾವಿನಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ನೋಡಿದ ಕಾರ್ಮಿಕರು ತಕ್ಷಣ ಕೆಲಸವನ್ನು ಬಿಟ್ಟು ಓಡಿ ಬಂದಿದ್ದಾರೆ.

ಘಟನೆಯ ಕುರಿತು ಸ್ಥಳೀಯರು ಮಾಹಿತಿ ನೀಡಿದ ಬಳಿಕ ಉರಗ ತಜ್ಞ ಸ್ನೇಕ್ ಬಾಬು ಸ್ಥಳಕ್ಕೆ ಬಂದು 13 ಅಡಿ ಉದ್ದದ 15 ಕೆಜಿ ತೂಕವುಳ್ಳ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಬೀಡಲಾಯಿತು. ಹಾವಿನ ರಕ್ಷಣೆಯ ನಂತರ ಕಾರ್ಮಿಕರು ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.