ADVERTISEMENT

ಚಾಮರಾಜನಗರದಲ್ಲಿ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 6:03 IST
Last Updated 18 ಜುಲೈ 2019, 6:03 IST
ಬುಧವಾರ ಮಧ್ಯಾಹ್ನ ಸುರಿದ ಮಳೆಗೆ ಚಾಮರಾಜನಗರದ ಸೋಮವಾರಪೇಟೆ ಬಳಿ ರಸ್ತೆ ಬದಿಯಲ್ಲಿ ಹರಿದ ನೀರು
ಬುಧವಾರ ಮಧ್ಯಾಹ್ನ ಸುರಿದ ಮಳೆಗೆ ಚಾಮರಾಜನಗರದ ಸೋಮವಾರಪೇಟೆ ಬಳಿ ರಸ್ತೆ ಬದಿಯಲ್ಲಿ ಹರಿದ ನೀರು   

ಚಾಮರಾಜನಗರ: ನಗರದಲ್ಲಿ ಬುಧವಾರ ಸಂಜೆ ಸ್ವಲ್ಪ ಹೊತ್ತು ಮಳೆಯಾಗಿ ವಾತಾವರಣ ತಂಪಾಯಿತು. ಕೆಲವು ಕಡೆ ಚೆನ್ನಾಗಿ ಮಳೆ ಬಿದ್ದರೆ, ಇನ್ನೂ ಕೆಲವು ಕಡೆ ಸಾಧಾರಣ ಮಳೆಯಾಯಿತು.

ಮಧ್ಯಾಹ್ನ 3 ಗಂಟೆಗೆ ನಗರದೆಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬಂತು. ಮೂರೂವರೆ ಹೊತ್ತಿಗೆ 10 ನಿಮಿಷಗಳ ಕಾಲ ಮಳೆಯಾಯಿತು. ಸೋಮವಾರಪೇಟೆ ಹಾಗು ಸುತ್ತಮುತ್ತ ಜೋರಾಗಿಯೇ ಮಳೆ ಸುರಿಯಿತು. ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯಿತು.

ಸಂಜೆವರೆಗೂ ಮೋಡದ ವಾತಾವರಣ ಮುಂದುವರಿದು ಆರು ಗಂಟೆಯ ನಂತರ ಮತ್ತೆ ಮಳೆ ಸುರಿಯಿತು. ಅರ್ಧಗಂಟೆ ಕಾಲ‌ ಮಳೆ ಸುರಿದಿದ್ದರಿಂದ ಬಿಸಿಲಿನ ಝಳಕ್ಕೆ ಬಿಸಿಯಾಗಿದ್ದ ಹವೆ ತಂಪಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.