ಗುಂಡ್ಲುಪೇಟೆ: ಪಡಿತರ ರಾಗಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗುಂಡ್ಲುಪೇಟೆ ಪೊಲೀಸರು ಪಟ್ಟಣದ ಊಟಿ ಗೇಟ್ ಬಳಿ ಮಾಲು ಸಮೇತ ಬಂಧಿಸಿದ್ದಾರೆ.
ತಾಲ್ಲೂಕಿನ ಹಂಗಳಪುರದ ವಾಹನ ಚಾಲಕ ಸುರೇಶ್ ಹಾಗೂ ಹಂಗಳ ಗ್ರಾಮದ ಪ್ರಕಾಶ್ ಬಂಧಿತ ಆರೋಪಿಗಳು. ಇವರು ಗೂಡ್ಸ್ ಆಟೊದಲ್ಲಿ ಹಂಗಳ ಗ್ರಾಮದ ಕಡೆಯಿಂದ ಪಡಿತರ ರಾಗಿ ಮೂಟೆಗಳನ್ನು ಅಕ್ರಮವಾಗಿ ಸಾಗಿಸುತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಅಡ್ಡಗಟ್ಟಿ, ಆಟೊ ಪರಿಶೀಲಿಸಿದ್ದಾರೆ. ಯಾವುದೇ ದಾಖಲೆ ಇಲ್ಲದ ಪಡಿತರ ರಾಗಿ ಕಂಡುಬಂದಿದೆ. ಪೊಲೀಸರು ಮಾಲು ಸಮೇತ ಚಾಲಕ ಸುರೇಶ್ ಹಾಗೂ ಪ್ರಕಾಶ್ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. 1,600 ಕೆ.ಜಿ ಪಡಿತರ ರಾಗಿ ವಶಕ್ಕೆ ಪಡೆದು, ಆಹಾರ ನಿರೀಕ್ಷಕರ ಸಮ್ಮುಖದಲ್ಲಿ ಜಪ್ತಿ ಮಾಡಿದ್ದಾರೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಎೆಸ್‌ಐ ಮಹೇಶ್, ಕಾನ್‌ಸ್ಟೆಬಲ್ ಸಿದ್ದರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.