
ಚಾಮರಾಜನಗರ: ‘ತಾಲ್ಲೂಕಿನ ಅಮಚವಾಡಿ ಗ್ರಾಮದ ಅಂಗನವಾಡಿಯಲ್ಲಿ ಕೆಟ್ಟಿರುವ ಹಾಗೂ ಹುಳುಹಿಡಿದ ಮೊಟ್ಟೆಗಳನ್ನು ವಿತರಿಸಿದ್ದು, ಬದಲಿಸಿಕೊಡುವಂತೆ ಕೋರಿದರೂ ಸ್ಪಂದನೆ ದೊರಕಿಲ್ಲ ’ ಎಂದು ಬಾಣಂತಿ ದೀಪಾ ಆರೋಪಿಸಿದ್ದಾರೆ.
‘ನ.5ರಂದು ನನ್ನ ತಾಯಿಗೆ ವಿತರಿಸಿದ್ದ 40 ಮೊಟ್ಟೆಗಳ ಪೈಕಿ ಕೆಲವನ್ನು ಬಳಸಲು ಒಡೆದಾಗ ದುರ್ವಾಸನೆ ಬರುತ್ತಿತ್ತು. ಒಂದು ವಾರದ ಬಳಿಕ ಮೊಟ್ಟೆಗಳ ಕವಚದ ಸುತ್ತಲೂ ಹುಳುಗಳು ತುಂಬಿದ್ದವು. ಈ ಬಗ್ಗೆ ದೂರು ನೀಡಿದರೂ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಚಾಮರಾಜನಗರದ ಸಿಡಿಪಿಒ ಸ್ಪಂದಿಸಿಲ್ಲ’ ಎಂದು ದೂರಿದ್ದಾರೆ.
‘ಅವಧಿ ಮೀರಿದ, ಹಾಳಾದ ಮೊಟ್ಟೆಗಳನ್ನು ವಿತರಿಸಿರುವ ಬಗ್ಗೆ ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಕಚೇರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರೂ ಪ್ರಯೋಜವಾಗಿಲ್ಲ. ಕೊಳೆತ ಮೊಟ್ಟೆಗಳನ್ನು ಸೇವಿಸಿ ಗರ್ಭಿಣಿ, ಬಾಣಂತಿಯರು ಹಾಗೂ ಶಿಶುಗಳ ಆರೋಗ್ಯ ಹದಗೆಟ್ಟರೆ ಯಾರು ಜವಾಬ್ದಾರರು’ ಎಂದು ಪ್ರಶ್ನಿಸಿದ್ದಾರೆ.
‘ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು. ತಮ್ಮೊಂದಿಗಿನ ವೈಷಮ್ಯದಿಂದ ಮಹಿಳೆ ಹೀಗೆ ಆರೋಪಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ’ ಎಂದು ಸಿಡಿಪಿಒ ನಾಗೇಶ್ ಪ್ರತಿಕ್ರಿಯಿಸಿದರು.
ಪ್ರಕರಣದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಚಾಮರಾಜನಗರ ಸಿಡಿಪಿಒಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದುಸುರೇಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.