ADVERTISEMENT

ಮಳೆಗಾಗಿ ಪ್ರಾರ್ಥಿಸಿ ರುದ್ರಹೋಮ

​ಪ್ರಜಾವಾಣಿ ವಾರ್ತೆ
Published 15 ಮೇ 2019, 14:40 IST
Last Updated 15 ಮೇ 2019, 14:40 IST
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದ ಶೃಂಗೇರಿ ಶಂಕರಮಠದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಮಳೆಗಾಗಿ ರುದ್ರಹೋಮ ಮತ್ತು ನವಚಂಡಿಕಾ ಯಾಗ ನಡೆಸಲಾಯಿತು
ಚಾಮರಾಜನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮದ ಶೃಂಗೇರಿ ಶಂಕರಮಠದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಮಳೆಗಾಗಿ ರುದ್ರಹೋಮ ಮತ್ತು ನವಚಂಡಿಕಾ ಯಾಗ ನಡೆಸಲಾಯಿತು   

ಚಾಮರಾಜನಗರ: ತಾಲ್ಲೂಕಿನಹೆಬ್ಬಸೂರು ಗ್ರಾಮದ ಶೃಂಗೇರಿ ಶಂಕರಮಠದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಮಳೆಗಾಗಿ ಪ್ರಾರ್ಥಿಸಿ ರುದ್ರಹೋಮ ಮತ್ತು ನವಚಂಡಿಕಾ ಯಾಗವನ್ನು ಬುಧವಾರ ನಡೆಸಲಾಯಿತು.

ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳು ಮತ್ತು ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆದೇಶದ ಮೇರೆಗೆ ಶೃಂಗೇರಿ ಮಠದ ಪೌರೋಹಿತರಾದ ಯಜ್ಞೇಶ್ವರ ಐತಾಳ ಮತ್ತು ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ರುದ್ರಹೋಮ ಮತ್ತು ನವಚಂಡಿಕಾ ಯಾಗವನ್ನು ಮಳೆ ಮತ್ತು ಬೆಳೆ ಸಮೃದ್ಧಿಯಾಗಿ ಆಗಲಿ ಎಂದು ಮಾಡುತ್ತಿರುವುದಾಗಿ ಮಠದ ಧರ್ಮಾಧಿಕಾರಿ ಎಚ್.ಎಸ್.ಶ್ರೀಧರ ಪ್ರಸಾದ್ ತಿಳಿಸಿದರು.

ಈ ಯಾಗದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಹಾಗೂ ಮೈಸೂರು ಮತ್ತು ಬೆಂಗಳೂರಿನಿಂದ ಅನೇಕ ಭಕ್ತರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.