ಸಂತೇಮರಹಳ್ಳಿ: ‘ಸಮೀಪದ ಕುದೇರು ಗ್ರಾಮದ ಹಳೆಯ ಉಪ ನೋಂದಣಾಧಿಕಾರಿ ಕಚೇರಿ ಶಿಥಿಲವಾಗಿದ್ದು, ನೂತನ ಕಟ್ಟಡ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಗ್ರಾಮದಲ್ಲಿರುವ ಹಳೆಯ ಕಚೇರಿ ಸಂಪೂರ್ಣ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡವು ತುಂಬಾ ಹಳೆಯದಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ಚಾವಣಿ ಸೋರುತ್ತಿದೆ. ಕಳೆದ 3 ವರ್ಷಗಳ ಹಿಂದೆ ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಗೆ ಮೈಸೂರು ಜಿಲ್ಲೆಯ ಕೌಲಂದೆ ಹೋಬಳಿಯ 12 ಗ್ರಾಮಗಳು, ಚಾಮರಾಜನಗರ ಕಸಬಾ ಹೋಬಳಿಯ 8 ಗ್ರಾಮಗಳು ಹಾಗೂ ಸಂತೇಮರಹಳ್ಳಿ ಹೋಬಳಿಗೆ ಸೇರಿದ 45 ಗ್ರಾಮಗಳು ಸೇರಿವೆ’ ಎಂದು ಮುಖಂಡರಾದ ರಾಜೇಂದ್ರಸ್ವಾಮಿ, ಡಿ.ಪಿ.ಶಿವಕುಮಾರಸ್ವಾಮಿ ಹೇಳಿದರು.
‘ಜಮೀನು ಹಾಗೂ ನಿವೇಶನಗಳ ನೋಂದಣಿಗಾಗಿ ಗ್ರಾಮಸ್ಥರು ಈ ಉಪ ನೋಂದಣಿ ಕಚೇರಿಗೆ ಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆ ತಲುಪಿರುವ ಕಟ್ಟಡವನ್ನು ತೆರವುಗೊಳಿಸಿ ನೂತನವಾಗಿ ನಿರ್ಮಿಸಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.