ಚಾಮರಾಜನಗರ: ಜ್ಞಾನದೀಪ ಟ್ರಸ್ಟ್ ವತಿಯಿಂದ ನಗರದ ವರನಟ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾವಗೀತೆ ವಿಭಾಗದಲ್ಲಿ ಬ್ರೈಟ್ ಕಾಲೇಜಿನ ಅಭಿಷೇಕ್, ಜಾನಪದ ಗೀತೆಗಳ ವಿಭಾಗದಲ್ಲಿ ಕೊಳ್ಳೇಗಾಲದ ಜೆಎಸ್‌ಎಸ್ ಕಾಲೇಜಿನ ಎಂ.ಭವಾನಿ ಪ್ರಥಮ ಸ್ಥಾನ ಪಡೆದುಕೊಂಡರು.
ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾವಗೀತೆ ವಿಭಾಗದಲ್ಲಿ ಪ್ರಜೀತಾ ದ್ವಿತೀಯ, ಪೂರ್ಣಶ್ರೀ ತೃತೀಯ ಸ್ಥಾನ ಹಾಗೂ ಬೋರಮ್ಮ ಗು.ಹಂಗರಗಿ, ಎಸ್.ದೀಪ, ಮೇಘನಾ, ನಿಂಗರಾಜು, ಸ್ಪಂದನ ಸಮಾಧಾನಕಾರ ಬಹುಮಾನ ಪಡೆದರು.
ಜಾನಪದಗೀತೆ ವಿಭಾಗದಲ್ಲಿ ತಸ್ಲೀಮ್ ದ್ವಿತೀಯ, ನಯನಾ ತೃತೀಯ, ಐಶ್ವರ್ಯ, ಎಂ.ಸುಗಂಧ, ಕೆ.ಅರ್ಷಿಯ, ಅಂಜಲಿ, ಪೂರ್ಣಿಮಾ ಸಮಾಧಾನಕಾರ ಬಹುಮಾನ ಪಡೆದರು.
ಬಹುಮಾನ ವಿತರಿಸಿದ ಗ್ರೀನ್ ಪ್ಯಾಲೇಸ್ ಹೆರಿಟೇಜ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಆರ್.ನಾರಾಯಣ್ ಮಾತನಾಡಿ, ಜಿಲ್ಲಾ ಮಟ್ಟದ ಭಾವಗೀತೆ, ಜಾನಪದ ಗೀತೆಗಳ ಸ್ಪರ್ಧೆ ಅಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಭಿನಂದನೀಯ ಎಂದರು.
ಜ್ಞಾನದೀಪ ಟ್ರಸ್ಟ್ ಅಧ್ಯಕ್ಷ ಆರ್.ಪಿ.ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಶ್ರೀಕಂಠಮೂರ್ತಿ, ನಗರಸಭಾ ಸದಸ್ಯ ಎಂ.ಮಹೇಶ್, ಕಾಂಗ್ರೆಸ್ ಮುಖಂಡ ಆರ್.ಮಹದೇವು ಮಾತನಾಡಿದರು.
ಮೈಸೂರಿನ ಶ್ರೀಧರ್ಮಸ್ಥಳ ಮಂಜುನಾಥ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅನಿತಾ ಪಿ.ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಜಯಲಕ್ಷ್ಮಿ, ಸಂಯೋಜಕ ಜೆ.ವಿ.ವೀರಭದ್ರಪ್ಪ, ನಗರಸಭಾ ಸದಸ್ಯ ಬಸವಣ್ಣ, ಆರ್.ಎಸ್.ರಾಘವೇಂದ್ರ, ಶಿಕ್ಷಕ ನಟರಾಜು, ವರ್ತಕರ ಸಂಘದ ಅಧ್ಯಕ್ಷ ಶಂಕರ್, ಮಾದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.